ಗದಗ:ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಜಗಳ ನಡೆದು, ಬಸ್ ಚಾಲಕ ಬಸ್ಅನ್ನು ಮಾರ್ಗ ಮಧ್ಯದಿಂದಲೇ ಪೊಲೀಸ್ ಠಾಣೆಗೆ ಕೊಂಡೊಯ್ದ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.
ಕಂಡಕ್ಟರ್-ಪ್ರಯಾಣಿಕನ ನಡುವೆ ರಂಪಾಟ: ಸೀದಾ ಪೊಲೀಸ್ ಠಾಣೆಗೆ ಬಸ್ ಕೊಂಡೊಯ್ದ ಚಾಲಕ! -
ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಜಗಳ ನಡೆದು, ಬಸ್ ಚಾಲಕ ಬಸ್ಅನ್ನು ಮಾರ್ಗ ಮಧ್ಯದಿಂದಲೇ ಪೊಲೀಸ್ ಠಾಣೆಗೆ ಕೊಂಡೊಯ್ದ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.
ಕಂಡಕ್ಟರ್, ಪ್ರಯಾಣಿಕನ ರಂಪಾಟ...ಬಸ್ ಪೊಲೀಸ್ ಠಾಣೆಗೆ ಕೊಂಡೊಯ್ದ ಚಾಲಕ
ನರಗುಂದ ಪಟ್ಟಣದಿಂದ ಅಮರಗೋಳಕ್ಕೆ ಹೊರಟಿದ್ದ ಬಸ್‌ನಲ್ಲಿ ಅಮರಗೋಳದ ಪ್ರಯಾಣಿಕ ಸತೀಶ್ ಹಾಗೂ ಬಸ್ ಕಂಡಕ್ಟರ್ ನಡುವೆ ಗಲಾಟೆ ನಡೆದಿದೆ. ಇವರಿಬ್ಬರ ಜಗಳ ಬಸ್ನಲ್ಲಿದ್ದ ಉಳಿದೆಲ್ಲ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದೆ. ಇದರಿಂದ ಬಸ್ ಚಾಲಕ ನಲವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ಅನ್ನು ಸೀದಾ ಪಕ್ಕದ ನರಗುಂದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.
ಇವರಿಬ್ಬರ ಜಗಳದಲ್ಲಿ 40ಕ್ಕೂ ಹೆಚ್ಚಿನ ಪ್ರಯಾಣಿಕರು ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಪೊಲೀಸ್ ಠಾಣೆ ಎದುರು ನಿಲ್ಲುವಂತಾಯಿತು. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.