ಲಿಂಗೈಕ್ಯ ಮಾತೆ ಮಹಾದೇವಿಗೆ ಗದಗದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ - Mathe Mahadevi
ಲಿಂಗಾಯತ ಧರ್ಮದ ಮುಖಂಡರು ಲಿಂಗೈಕ್ಯ ಮಾತೆ ಮಹಾದೇವಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಬಸವಣ್ಣನವರ ತತ್ವಗಳು, ವಚನಗಳನ್ನು ಪಠಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದರು.
ಮಾತೆ ಮಹಾದೇವಿ
ಗದಗ : ಲಿಂಗಾಯತ ಅನುಯಾಯಿಯಾಗಿದ್ದ ಮಾತೆ ಮಹಾದೇವಿ ಲಿಂಗೈಕ್ಯರಾದ ಹಿನ್ನೆಲೆ ಇಂದು ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಲಿಂಗಾಯತ ಧರ್ಮದ ಮುಖಂಡರು ಲಿಂಗೈಕ್ಯ ಮಾತೆ ಮಹಾದೇವಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಬಸವಣ್ಣವರ ತತ್ವಗಳು, ವಚನಗಳನ್ನು ಪಠಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದರು. ಪರಮಾತ್ಮನು ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.