ಗದಗ:ಕಾಂಪೌಡಂರ್ ಓರ್ವ ಸಾವನ್ನಪ್ಪಿದ್ದು, ಆತನ ಮೃತದೇಹವನ್ನು ಕಂಡು ಬಿಡಾಡಿ ದನಗಳು ಕಣ್ಣೀರಿಟ್ಟ ಘಟನೆ ನಡೆದಿದೆ.
ಕಾಂಪೌಂಡರ್ ಮೃತದೇಹ ನೋಡಿ ಕಣ್ಣೀರು ಸುರಿಸಿದ ಬಿಡಾಡಿ ದನಗಳು! - Gadag stray cattle News
ನೆಚ್ಚಿನ ಕಾಂಪೌಡಂರ್ ಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದು, ಆತನ ಮೃತದೇಹ ಕಂಡು ಬಿಡಾಡಿ ದನಗಳು ದುಃಖತಪ್ತ ಭಾವನೆ ವ್ಯಕ್ತಪಡಿಸಿವೆ.
ಮುಳಗುಂದ ಪಟ್ಟಣದ ಪಶು ಆಸ್ಪತ್ರೆಯ ಕಾಂಪೌಡಂರ್ ಆಗಿ ಸೇವೆ ಸಲ್ಲಿಸುತ್ತಿದ್ದ ಯಲ್ಲಪ್ಪ ಗದುಗಿನ ಎಂಬುವರು ನಿನ್ನೆ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಆದರೆ ಅವರ ಮೃತದೇಹವನ್ನು ಕಂಡ ಬಿಡಾಡಿ ದನಗಳು ದುಃಖತಪ್ತ ಭಾವನೆ ವ್ಯಕ್ತಪಡಿಸಿವೆ.
ಯಲ್ಲಪ್ಪ ಅವರು ತಮ್ಮ ಸೇವಾವಧಿಯಲ್ಲಿ ರಜೆ ತೆಗದುಕೊಳ್ಳದೆ ಪ್ರತಿ ದಿನ ದನಗಳ ಆರೈಕೆಯಲ್ಲಿ ತೊಡಗಿ, ಮೇಲಾಧಿಕಾರಿಗಳು ತಮಗೆ ಒದಗಿಸಿದ ಕೆಲಸವನ್ನೂ ಮೀರಿ ಪ್ರಾಣಿಗಳ ಚಿಕಿತ್ಸೆಯಲ್ಲಿ ನಿರತರಾಗಿದ್ದರು. ಪ್ರತಿ ದಿನ ಸುತ್ತಲೂ ಹತ್ತಾರು ಹಳ್ಳಿಗಳಿಗೆ ಓಡಾಡಿ ರೈತರ ದನಕರುಗಳಿಗೆ ಚಿಕಿತ್ಸೆ ನೀಡಿ ಅವುಗಳನ್ನು ಗುಣಪಡಿಸಿ ಪ್ರಾಣಿಗಳ ಮುಗ್ಧ ಪ್ರೀತಿಗೆ ಪಾತ್ರರಾಗಿದ್ದರು. ಆದರೆ ಇದೀಗ ಯಲ್ಲಪ್ಪ ಅವರ ಪಾರ್ಥಿವ ಶರೀರವನ್ನು ಕಂಡ ದನಗಳು ದುಃಖ ಭಾವನೆಯನ್ನು ವ್ಯಕ್ತಪಡಿಸಿವೆ.