ಗದಗ: ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಹೊಡದ ಪರಿಣಾಮ ಇಬ್ಬರು ಚಾಲಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಗದಗದಲ್ಲಿ ನಡೆದಿದೆ.
ಲಾರಿಗಳ ನಡುವೆ ಡಿಕ್ಕಿ: ಇಬ್ಬರು ಚಾಲಕರು ಸ್ಥಳದಲ್ಲೇ ಸಾವು - ಗದಗ ಅಪಘಾತ ಸುದ್ದಿ
ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಹೊಡದ ಪರಿಣಾಮ ಇಬ್ಬರು ಚಾಲಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ನಾರಾಯಣಪೂರ ಗ್ರಾಮದ ಬಳಿ ಬೆಳಗಿನ ಜಾವ ನಡೆದಿದೆ.
ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಚಾಲಕರು ಸ್ಥಳದಲ್ಲಿಯೇ ಸಾವು
ಗದಗ ತಾಲೂಕಿನ ನಾರಾಯಣಪೂರ ಗ್ರಾಮದ ಬಳಿ ಬೆಳಗಿನ ಜಾವ ಘಟನೆ ನಡೆದಿದೆ. ಮೈಸೂರು ಮೂಲದ ಮಂಜುನಾಥ 55 ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದ ಮೋಹನ್ 40 ಮೃತ ದುರ್ದೈವಿಗಳು. ಗದಗದಿಂದ ಕುಷ್ಟಗಿಗೆ ಹೊರಟಿದ್ದ ಲಾರಿ ಹಾಗೂ ಗದಗ ಕಡೆಗೆ ಬರುತ್ತಿದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ಲಾರಿಗಳು ನುಜ್ಜುಗುಜ್ಜಾಗಿವೆ.
ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.