ಗದಗ: ಮೇಕೆದಾಟು ಯೋಜನೆ ಕಾಮಗಾರಿ ವಿಳಂಬ ಕುರಿತು ಕಾಂಗ್ರೆಸ್ ಪಾದಯಾತ್ರೆ ನಡೆಸಲು ಮುಂದಾಗಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಮೇಕೆದಾಟು ಯೋಜನೆ ವಿಳಂಬ ವಿಚಾರ: ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಸಿಎಂ ಕಿಡಿ - ಗದಗನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
ಈ ಹಿಂದೆ ಕಾಂಗ್ರೆಸ್‌ನವರು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆ ಮಾಡಿ ಅವರು ಏನು ಮಾಡಿದರು? ಎಂದು ಸಿಎಂ ಪ್ರಶ್ನಿಸಿದರು.
ನಗರದ ಹಾಲಕೇರಿಯಲ್ಲಿ ಮತನಾಡಿದ ಅವರು, ಕಾಂಗ್ರೆಸ್‌ನವರು ಈ ವಿಷಯದಲ್ಲಿ ರಾಜಕೀಯ ಬಿಟ್ಟು ಬೇರೇನು ಮಾಡಲು ಸಾಧ್ಯ?, ಈ ಹಿಂದೆ ಕೃಷ್ಣೆಯ ಮೇಲೆ ಆಣೆ ಅಂತ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿದ್ದರು. ಈ ಪಾದಯಾತ್ರೆ ಮಾಡಿ ಅವರೇನು ಮಾಡಿದರು? ಎಂದು ಪ್ರಶ್ನಿಸಿದರು.
ಈ ಹಿಂದೆ ಕರ್ನಾಟಕ ಪವರ್ ಕಾರ್ಪೊರೇಷನ್ ಮೇಕೆದಾಟು ಯೋಜನೆ ಬಗ್ಗೆ ಡಿಪಿಆರ್ ತಯಾರಿಸಿತ್ತು. ಅದನ್ನು ರದ್ಧುಗೊಳಿಸಿ ನಾಲ್ಕೈದು ವರ್ಷ ಬರೀ ಕಾಲಹರಣ ಮಾಡಿದರು. ಮೇಕೆದಾಟು ವಿಷಯದಲ್ಲಿ ನಾವು ಬದ್ಧವಾಗಿದ್ದೇವೆ. ಕಾನೂನು ರೀತಿಯಲ್ಲಿ ಮುಂದುವರೆದು ಆರಂಭಿಸಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.