ಕರ್ನಾಟಕ

karnataka

ETV Bharat / state

ಗದಗ: ಕೊರೊನಾ ನಡುವೆಯೇ ಚಿಕೂನ್ ಗುನ್ಯಾ, ಡೆಂಘೀ ಪ್ರಕರಣಗಳು ಪತ್ತೆ - Chicken Gunya and Dengue cases found in gadag

ಗದಗ ಜಿಲ್ಲೆಯಲ್ಲಿ ಚಿಕೂನ್​ಗುನ್ಯಾ ಹಾಗೂ ಡೆಂಘೀ ಪ್ರಕರಣಗಳು ಕಂಡು ಬಂದಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿದೆ.

ಚಿಕನ್ ಗುನ್ಯಾ, ಡೆಂಗ್ಯೂ ಪ್ರಕರಣಗಳು ಪತ್ತೆ
ಚಿಕನ್ ಗುನ್ಯಾ, ಡೆಂಗ್ಯೂ ಪ್ರಕರಣಗಳು ಪತ್ತೆ

By

Published : Mar 24, 2021, 6:46 AM IST

Updated : Mar 24, 2021, 10:18 AM IST

ಗದಗ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಈ ನಡುವೆಯೇ ಇದೀಗ ಜಿಲ್ಲೆಯಲ್ಲಿ ಚಿಕೂನ್ ಗುನ್ಯಾ, ಡೆಂಘೀಯಂತಹ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ‌.

ಗದಗದಲ್ಲಿ ಹೆಚ್ಚುತ್ತಿರುವ ಚಿಕೂನ್ ಗುನ್ಯಾ, ಡೆಂಘೀ ಪ್ರಕರಣಗಳು

ಗದಗ ಜಿಲ್ಲೆಯಲ್ಲಿ ಚಿಕೂನ್​ಗುನ್ಯಾ ಹಾಗೂ ಡೆಂಘೀ ಪ್ರಕರಣಗಳು ಕಂಡು ಬಂದಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿದೆ. ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಚಿಕೂನ್ ಗುನ್ಯಾ, ಡೆಂಘೀ ತಾಂಡವವಾಡುತ್ತಿದೆ. ಗ್ರಾಮದಲ್ಲಿ 30 ಕ್ಕೂ ಹೆಚ್ಚು ಜನರು ಈಗಾಗಲೇ ಹಾಸಿಗೆ ಹಿಡಿದಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಕ್ಕಳು ಹಾಗೂ ವಯೋವೃದ್ಧರು ಜ್ವರ ಹಾಗೂ ಕೈ, ಕಾಲು ನೋವಿನಿಂದ ಬಳಲುತ್ತಿದ್ದಾರೆ. ಹಾಗಾಗಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಶಿಬಿರಗಳನ್ನು ಮಾಡಿ ಜನರನ್ನು ತಪಾಸಣೆ ಮಾಡಬೇಕು ಅಂತಾ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಇನ್ನು ಡಂಬಳ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಇನ್ನೊಂದೆಡೆ ಆರೋಗ್ಯ ಇಲಾಖೆ ಅಧಿಕಾರಿಗಳು ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೆ ಕಳುಹಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಈ ಕುರಿತು ಗದಗ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ್ ಬಸರಿಗಿಡದ ಅವರನ್ನು ಕೇಳಿದ್ರೆ, ಡಂಬಳ ಗ್ರಾಮದಲ್ಲಿ ಮಲೇರಿಯಾ, ಡೆಂಘೀ ಹಾಗೂ ಚಿಕೂನ್ ಗುನ್ಯಾ ರೋಗ ಲಕ್ಷಣಗಳು ಕಂಡು ಬಂದಿದ್ದು, ನಮ್ಮ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ನಾನು ಕೂಡ ಭೇಟಿ ನೀಡಿ, ಅನಾರೋಗ್ಯಕ್ಕೆ ತುತ್ತಾದ ಜನರ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ ಅಂತಾ ಹೇಳಿದ್ದಾರೆ.

ಕಳೆದ ಜನವರಿ ತಿಂಗಳಿಂದ ಈವರಿಗೆ 32 ಡೆಂಘೀ ಕೇಸ್, 9 ಚಿಕೂನ್ ಗುನ್ಯಾ ಕೇಸ್ ಪತ್ತೆಯಾಗಿದೆ. ಈ ನಡುವೆಯೇ ಗದಗ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕೂಡ ಪತ್ತೆಯಾಗುತ್ತಿವೆ. ಹಾಗಾಗಿ ಜಿಲ್ಲೆಯಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Last Updated : Mar 24, 2021, 10:18 AM IST

ABOUT THE AUTHOR

...view details