ಕರ್ನಾಟಕ

karnataka

ETV Bharat / state

ಕರು ಮೇಲೆ ದಾಳಿ ಶಂಕೆ: ಮುಂಡರಗಿಯಲ್ಲಿ ಮತ್ತೆ ಆವರಿಸಿದ ಚಿರತೆ ಭಯ

ಗದಗ ಜಿಲ್ಲೆಯಲ್ಲಿ ಕರು ಸಾವನ್ನಪ್ಪಿದ್ದು, ಚಿರತೆ ದಾಳಿ ಮಾಡಿ ಕೊಂದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಪೂರಕವಾಗಿ ಜಮೀನಿನಲ್ಲಿ ಮತ್ತೆ ಚಿರತೆ ಹೆಜ್ಜೆಗಳು ಕಾಣಿಸಿಕೊಂಡಿವೆ.

cheetha attacks on calf in gadag
ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಶಂಕೆ

By

Published : Jan 27, 2021, 4:43 PM IST

ಗದಗ:ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಶಂಕೆ

ಎರಡು ದಿನಗಳ ಹಿಂದೆ ಜಮೀನಿನ ಶೆಡ್​ನಲ್ಲಿ ಕಟ್ಟಿದ್ದ ಕರುವಿನ ಮೇಲೆ ದಾಳಿ ಮಾಡಿದ್ದ ಚಿರತೆ ಮತ್ತೆ ನಿನ್ನೆ ತಡ ರಾತ್ರಿ ಬಂದು ಕರುವನ್ನು ತಿಂದು ಹೋಗಿದೆ ಎನ್ನಲಾಗಿದೆ.

ಈ ಅನುಮಾನಕ್ಕೆ ಪುಷ್ಠಿ ನೀಡುವಂತೆ ಜಮೀನುಗಳಲ್ಲಿ ಚಿರತೆ ಹೆಜ್ಜೆಗಳು ಕಾಣಿಸಿಕೊಂಡಿವೆ. ಹಾಗಾಗಿ ಕಪ್ಪತ್ತಗುಡ್ಡ ಭಾಗದ ಜನರು ಮತ್ತೆ ಭಯಭೀತರಾಗಿದ್ದಾರೆ. ಕಳೆದ ಬಾರಿಯೂ ಚಿರತೆ ಪ್ರತ್ಯಕ್ಷವಾಗಿತ್ತು. ಈಗ ಮತ್ತೆ ಕಾಣಿಸಿಕೊಂಡು ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ:ಒಂದು ಕೋಣಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮೂರು ಹಳ್ಳಿಯ ಜನ!

ABOUT THE AUTHOR

...view details