ಕರ್ನಾಟಕ

karnataka

ETV Bharat / state

ಸತ್ಯಾಗ್ರಹ ಕೈಬಿಟ್ಟು ಮಾತುಕತೆಗೆ ಬರುವಂತೆ ಪಂಚಮಸಾಲಿ ಶ್ರೀಗಳಿಗೆ ಸಿ.ಸಿ. ಪಾಟೀಲ ಮನವಿ - ಪಂಚಮಸಾಲಿ ಸಮಾಜದವರ 2ಎ ಮೀಸಲಾತಿ ಹೋರಾಟ

ಮೀಸಲಾತಿ ಜಟಿಲವಾದ ವಿಷಯ. ಒಂದು ಹೇಳಿಕೆಯಿಂದ ಇನ್ನೊಂದು ಸಮುದಾಯಕ್ಕೂ ನೋವಾಗಬಾರದು, ನಮ್ಮ‌ ಸಮುದಾಯಕ್ಕೂ ಅಸಮಾಧಾನ ಆಗಬಾರದು, ಶ್ರೀಗಳಿಗೂ ನೋವಾಗಬಾರದು. ಸರ್ಕಾರಕ್ಕೂ ಮುಜುಗರ ಆಗಬಾರದು ಎಂದರು.

CC Patil
ಸಚಿವ ಸಿ.ಸಿ ಪಾಟೀಲ್

By

Published : Feb 27, 2021, 3:36 PM IST

ಗದಗ: ಪಂಚಮಸಾಲಿ ಸಮಾಜದವರ 2ಎ ಮೀಸಲಾತಿ ಹೋರಾಟ ಕುರಿತು ಸಚಿವ ಸಿ.ಸಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ. ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದುರದೃಷ್ಟವಶಾತ್‌ ಸಮಾವೇಶದ ಕೊನೆಗಳಿಗೆಯಲ್ಲಿ ನಡೆಯಬಾರದ ಕೆಲವು ಘಟನೆಗಳು ನಡೆದವು. ನಮಗೂ ಬೇಸರ ಇದೆ, ಸ್ವತಃ ಪೂಜ್ಯರಿಗೂ ಬೇಸರ ಇದೆ ಎಂದರು.

ಸತ್ಯಾಗ್ರಹ ಕೈಬಿಟ್ಟು ಮಾತುಕತೆಗೆ ಬರುವಂತೆ ಪಂಚಮಸಾಲಿ ಶ್ರೀಗಳಿಗೆ ಸಿಸಿ ಪಾಟೀಲ ಮನವಿ

ಸತ್ಯಾಗ್ರಹ ಕೈಬಿಡುವಂತೆ ಪೂಜ್ಯರಿಗೆ ಈಗಲೂ ಮನವಿ ಮಾಡುತ್ತೇನೆ. ಸತ್ಯಾಗ್ರಹದ ಹಾದಿಯನ್ನು ಕೈಬಿಟ್ಟು ಮಾತುಕತೆಗೆ ಬರುವಂತೆ ಮನವಿ ಮಾಡಿಕೊಳ್ಳುತ್ತೇನೆ. ಮೀಸಲಾತಿ ಜಟಿಲವಾದ ವಿಷಯ. ಒಂದು ಹೇಳಿಕೆಯಿಂದ ಇನ್ನೊಂದು ಸಮುದಾಯಕ್ಕೂ ನೋವಾಗಬಾರದು, ನಮ್ಮ‌ ಸಮುದಾಯಕ್ಕೂ ಅಸಮಾಧಾನ ಆಗಬಾರದು, ಶ್ರೀಗಳಿಗೂ ನೋವಾಗಬಾರದು. ಸರ್ಕಾರಕ್ಕೂ ಮುಜುಗರ ಆಗಬಾರದು ಎಂದರು.

ನಾಲ್ಕು ಗೋಡೆಯ ಮಧ್ಯೆ ಸಮಸ್ಯೆ ಬಗೆಹರಿಸಿಕೊಳ್ಳೋಣ. ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಲು ನಾನು ಹಾಗೂ ಬಸವರಾಜ ಬೊಮ್ಮಾಯಿ, ಮುರಗೇಶ ನಿರಾಣಿ ಸಾಕಷ್ಟು ಪ್ರಯತ್ನ ಮಾಡಿದ್ದೇವೆ ಎಂದರು.

ಇದನ್ನೂ ಓದಿ:ವಿದ್ಯಾರ್ಥಿನಿಯಿಂದ ಕಿಡ್ನ್ಯಾಪ್ ನಾಟಕ.. ಪ್ರಕರಣದ ಹಿಂದಿನ ರೋಚಕ ಕಹಾನಿ ಏನ್ಗೊತ್ತಾ?

ABOUT THE AUTHOR

...view details