ಗದಗ : ಮಲಪ್ರಭಾ ಜಲಾಶಯ ನೀರಿನ ಮಟ್ಟ 2,070 ಅಡಿಗೆ ತಲುಪಿದ ತಕ್ಷಣ ನದಿಗೆ ಮತ್ತು ಕಾಲುವೆಗಳಿಗೆ ನೀರು ಹರಿಬಿಡಿ ಎಂದು ಅಧಿಕಾರಿಗಳಿಗೆ ಸಚಿವ ಸಿ.ಸಿ.ಪಾಟೀಲ್ ಸೂಚಿಸಿದ್ದಾರೆ.
ಮಲಪ್ರಭಾ ಜಲಾಶಯದಿಂದ ನೀರು ಹರಿಬಿಡುವಂತೆ ಸಿ.ಸಿ.ಪಾಟೀಲ್ ಸೂಚನೆ - Malaprabha reservoir water level
ಮಲಪ್ರಭಾ ಜಲಾಶಯದ ಮಟ್ಟ 2,070 ಅಡಿಗೆ ತಲುಪಿದ ತಕ್ಷಣ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
![ಮಲಪ್ರಭಾ ಜಲಾಶಯದಿಂದ ನೀರು ಹರಿಬಿಡುವಂತೆ ಸಿ.ಸಿ.ಪಾಟೀಲ್ ಸೂಚನೆ Cc patil](https://etvbharatimages.akamaized.net/etvbharat/prod-images/768-512-02:44:23:1596791663-kn-gdg-02-cc-patil-7203292-07082020143947-0708f-1596791387-380.jpg)
ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಮಲಪ್ರಭಾ ಜಲಾಶಯ ಭರ್ತಿ ಆಗುವ ಲಕ್ಷಣಗಳಿವೆ. ಹಾಗಾಗಿ ಜಲಾಶಯದ ಮಟ್ಟ 2,070 ಅಡಿಗೆ ತಲುಪಿದ ತಕ್ಷಣ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಗದಗ ಜಿಲ್ಲೆಯ ನರಗುಂದ ಭಾಗದಲ್ಲಿ ಕಳೆದ ವರ್ಷ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಅಪಾರ ಅನುಭವವಿದೆ. ಹಾಗಾಗಿ ನೆರೆಯ ಭೀಕರತೆ, ಹಾನಿ ಮತ್ತು ಜನಸಾಮಾನ್ಯರಿಗೆ ಅದರಿಂದ ಉಂಟಾಗುವ ತೊಂದರೆಗಳ ಸಂಪೂರ್ಣ ಪರಿಕಲ್ಪನೆ ನಮಗಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಸಚಿವ ತಿಳಿಸಿದ್ದಾರೆ.