ಕರ್ನಾಟಕ

karnataka

ETV Bharat / state

ಕಾರ್ಮಿಕರಿಗೆ ಸಿ ಸಿ ಪಾಟೀಲ್ ಸಹಾಯಹಸ್ತ... ಕೃತಜ್ಞತೆಯೊಂದಿಗೆ 'ಕಾಶಿಗೆ' ಆಹ್ವಾನಿಸಿದ ಯುಪಿ ಬಿಜೆಪಿ ಅಧ್ಯಕ್ಷ - ಕೃತಜ್ಞತೆಯೊಂದಿಗೆ 'ಕಾಶಿಗೆ' ಆಹ್ವಾನಿಸಿದ ಯುಪಿ ಬಿಜೆಪಿ ಅಧ್ಯಕ್ಷ

ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ವಲಸೆ ಕಾರ್ಮಿಕರನ್ನು ಕಂಡು ಗದಗ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಂದಿಸಿದ್ದಾರೆ. ಎಲ್ಲಾ ಕಾರ್ಮಿಕರಿಗೆ ಊಟ ಉಪಚಾರ ಮಾಡಿಸಿ ಅವರನ್ನು ಉತ್ತರ ಪ್ರದೇಶದ ಅಜಮ್​ಘಡ ಜಿಲ್ಲೆಗೆ ತೆರಳಲು ಬಸ್ ವ್ಯವಸ್ಥೆ ಮಾಡಿ, ವಾಪಸ್ ಕಳುಹಿಸಿಕೊಟ್ಟಿದ್ದರು. ಇದಕ್ಕೆ ಕೃತಜ್ಞತೆ ಸಲ್ಲಿಸಿರುವ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರು ಸಚಿವ ಸಿ ಸಿ ಪಾಟೀಲ್​ ಅವರನ್ನು ಕಾಶಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.

CC Patil Helped UP Workers during the lockdown time at Gadag
ಯುಪಿ ಕಾರ್ಮಿಕರಿಗೆ ಸಿಸಿ ಪಾಟೀಲ್ ಸಹಾಯಹಸ್ತ,

By

Published : May 19, 2020, 5:06 PM IST

ಗದಗ: ಜಿಲ್ಲೆಯಲ್ಲಿ ಲಾಕ್​ಡೌನ್​ ಸಂದರ್ಭದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ಯುಪಿಯ ಜನರನ್ನು ಸಚಿವ ಸಿ ಸಿ ಪಾಟೀಲ್ ಅಜಮ್​ಘಡ ಜಿಲ್ಲೆಗೆ ಬಸ್ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ತಲುಪಿಸುವಲ್ಲಿ ಸಫಲರಾಗಿದ್ದಾರೆ. ಇದೀಗ ಇದನ್ನು ಗಮನಿಸಿದ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್​ಸಿಂಗ್​ ಅಭಿನಂದನೆ ಸಲ್ಲಿಸಿದ್ದಾರೆ.

ಕೃತಜ್ಞತೆಯೊಂದಿಗೆ 'ಕಾಶಿಗೆ' ಆಹ್ವಾನಿಸಿದ ಯುಪಿ ಬಿಜೆಪಿ ಅಧ್ಯಕ್ಷ

ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಜನರನ್ನು ಕಂಡು ಜಿಲ್ಲೆಯ ಉಸ್ತುವಾರಿ ಸಚಿವರ ಮನಮಿಡಿದಿದ್ದು, ಎಲ್ಲಾ ಯುಪಿಯ ಕಾರ್ಮಿಕರಿಗೆ ಊಟ ಉಪಚಾರ ಮಾಡಿಸಿ ಅವರನ್ನು ಅಜಮ್​ಘಡ ಜಿಲ್ಲೆಗೆ ಬಸ್ ವ್ಯವಸ್ಥೆ ಮಾಡಿಸಿ ವಾಪಸ್ ಕಳುಹಿಸಿಕೊಟ್ಟಿದ್ದರು.

ಈ ಕುರಿತು ಸಚಿವ ಸಿ ಸಿ ಪಾಟೀಲ್​ಗೆ ಅಭಿನಂದನಾ ಪತ್ರ ಬರೆದಿರುವ ಸ್ವತಂತ್ರ ಕುಮಾರ್​ ಅವರು, ಕುಟುಂಬ ಸಮೇತ ಕಾಶಿ ವಿಶ್ವನಾಥನ ದರ್ಶನಕ್ಕೆ ತಾವು ಬರಬೇಕು, ದೇವರು ತಮಗೆ ಸಕಲ ಸೌಕರ್ಯ ಆರೋಗ್ಯ ಕೊಟ್ಟು ಕಾಪಾಡಲಿ. ನಿಮಗೆ ಸ್ವಾಮಿಯ ಆಶೀರ್ವಾದ ಸದಾ ಇರಲಿ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

For All Latest Updates

ABOUT THE AUTHOR

...view details