ಕರ್ನಾಟಕ

karnataka

ETV Bharat / state

ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ಹೋರಾಡಿದವರ ಮೇಲೆಯೇ ಕೇಸ್ ದಾಖಲು.. - ಮರಳು ಗಣಗಾರಿಕೆ ತಡೆಯಲು ಆಗ್ರಹ

ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಇಂದು ಶೀರನಹಳ್ಳಿ ಗ್ರಾಮಸ್ಥರು ಗದಗ ಜಿಲ್ಲಾಡಳಿತ ಭವನದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಕುರಿತು ಫೋಟೋಗಳನ್ನು ಸಹ ತೋರಿಸಿದ ಪ್ರತಿಭಟನಾಕಾರರು ಮೊದಲು ಮಂಜುನಾಥ್ ಮೇಲಿರೋ ಕೇಸ್ ರದ್ದುಪಡಿಸಬೇಕು ಹಾಗೂ ಅಕ್ರಮ‌ ಮರಳು ಗಣಿಗಾರಿಕೆ ತಡೆಯಬೇಕೆಂದು ಆಗ್ರಹಿಸಿದರು.

ಪ್ರತಿಭಟನಾ ನಿರತ ಗ್ರಾಮಸ್ಥರು

By

Published : Aug 2, 2019, 6:21 PM IST

ಗದಗ:ಜಿಲ್ಲೆಯ ಗ್ರಾಮವೊಂದರಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ ಗ್ರಾಮ ಪಂಚಾಯತ್ ಅಧ್ಯಕ್ಷನ ವಿರುದ್ಧವೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕೇಸ್ ಮಾಡಿರೋ ಘಟನೆ ನಡೆದಿದೆ.

ಪ್ರತಿಭಟನಾ ನಿರತ ಗ್ರಾಮಸ್ಥರು..

ಜಿಲ್ಲೆಯ ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದಲ್ಲಿನ ತುಂಗಭದ್ರಾ ನದಿಯಲ್ಲಿ ಕಳೆದ 2 ವರ್ಷಗಳಿಂದ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದನ್ನು ತಡೆಯುವಂತೆ ಹೋರಾಟ ಮಾಡಿದ ಶೀರನಹಳ್ಳಿಯ ಸದಸ್ಯ ಹಾಗೂ ಶಿಂಗಟಾಲೂರು ಗ್ರಾಮಪಂಚಾಯತ್ ಅಧ್ಯಕ್ಷ ಮಂಜುನಾಥ್ ಮೇಲೆ ಸರ್ಕಾರಿ ಇಲಾಖೆಗಳು ಮುಗಿಬಿದ್ದಿವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಮುಂಡರಗಿಯ ಪೊಲೀಸರು ಮಂಜುನಾಥ್ ಮೇಲೆ ಅಕ್ರಮ ಮರಳು ಸಂಗ್ರಹ ಮಾಡಿರೋ ಕುರಿತು ಎಫ್ಐಆರ್ ದಾಖಲು ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ‌.‌ ಶೀರನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಹೊರಗೆ ಸಂಗ್ರಹವಾಗಿರೋ ಮರಳಿಗೆ ಗ್ರಾಮಪಂಚಾಯತ್ ಅಧ್ಯಕ್ಷ ಮಂಜುನಾಥ್ ಜವಾಬ್ದಾರಿ ಎಂದು ದೂರು ದಾಖಲು ಮಾಡಲಾಗಿದೆ. ಇದೇ ವೇಳೆ ಮುಂಡರಗಿ ತಾಲೂಕಿನ ಎಲ್ಲೆಡೆ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ, ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಇಂದು ಶೀರನಹಳ್ಳಿ ಗ್ರಾಮಸ್ಥರು ಗದಗ ಜಿಲ್ಲಾಡಳಿತ ಭವನದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಕುರಿತು ಫೋಟೋಗಳನ್ನು ಸಹ ತೋರಿಸಿದ ಪ್ರತಿಭಟನಾಕಾರರು ಮೊದಲು ಮಂಜುನಾಥ್ ಮೇಲಿರೋ ಕೇಸ್ ರದ್ದುಪಡಿಸಬೇಕು ಹಾಗೂ ಅಕ್ರಮ‌ ಮರಳು ಗಣಿಗಾರಿಕೆ ತಡೆಯಬೇಕೆಂದು ಆಗ್ರಹಿಸಿದರು.

ABOUT THE AUTHOR

...view details