ಗದಗ: ಕಾರು ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿಶಿರೂರು ಗ್ರಾಮದ ಬಳಿ ನಡೆದಿದೆ.
ಗದಗದಲ್ಲಿ ಕಾರು ಪಲ್ಟಿ: ಮಹಿಳೆ ಸಾವು - ಗದಗ ಸುದ್ದಿ 2020
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿಶಿರೂರು ಗ್ರಾಮದ ಬಳಿ ಕಾರು ಪಲ್ಟಿಯಾಗಿದ ಪರಿಣಾಮ ಮಹಿಳೆ ಸ್ಥಳದಕಲ್ಲೇ ಸಾವನ್ನಪ್ಪಿದ್ದಾರೆ.
ಗದಗದಲ್ಲಿ ಅಪಘಾತ
ಹುಸೇನಬಿ ಮೃತಪಟ್ಟ ಮಹಿಳೆ. ಗಾಯಾಳುಗಳಾದ ರಾಜೇಸಾಬ್ ಮತ್ತು ಅಯಾನ್ ಎಂಬುವವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೊಟುಮಚಗಿ ಗ್ರಾಮದಿಂದ ಹಿರೇವಡ್ಡಟ್ಟಿ ಗ್ರಾಮಕ್ಕೆ ಗಂಡ, ಹೆಂಡತಿ ಮತ್ತು ಮಗ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ತಿರುವಿನಲ್ಲಿ ವೇಗವಾಗಿ ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ. ಇನ್ನು ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.