ಗದಗ : ರಕ್ತದ ಗುಂಪು ಅದಲು ಬದಲಾಗಿ ಯುವತಿ ಮರಣ ಹೊಂದಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ದೂರುತ್ತಿದ್ದಾರೆ. ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಜೀವನ್ ಸಾಬ್ ಮತ್ತು ಹಮಿದಾಬೇಗಂ ಎಂಬ ದಂಪತಿಯ 21 ವರ್ಷದ ಮೈಮುನ್ ತಬಸುಬ್ ಮೃತ ಹೊಂದಿದ ಯುವತಿ.
ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಮುನ್ಳನ್ನು ಗದಗದ ಜರ್ಮನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ರಕ್ತ ಹಾಕಿಸಬೇಕು ಎಂದು ಸಲಹೆ ನೀಡಿದ್ದರು. ಅದರಂತೆ ರಕ್ತನಿಧಿಯಿಂದ ತಂದು ರಕ್ತ ಕೊಟ್ಟ ಕೆಲವೇ ನಿಮಿಷದಲ್ಲಿ ಮಗಳು ಮರಣಹೊಂದಿದ್ದಾಳೆ. ವೈದ್ಯರು ಬೇರೆ ಗುಂಪಿನ ರಕ್ತ ಕೊಟ್ಟಿದ್ದರಿಂದ ಮೃತ ಪಟ್ಟಿದ್ದಾಳೆ ಎಂದು ವೈದ್ಯರ ವಿರುದ್ಧ ಮೃತಳ ಪೋಷಕರು ಆರೋಪಿಸುತ್ತಿದ್ದಾರೆ. ಅಲ್ಲದೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.