ಗದಗ:ಗದಗ-ಬೆಟಗೇರಿ ನಗರಸಭೆಯಲ್ಲಿ ಹಲವು ದಶಕಗಳ ಬಳಿಕ ಬಿಜೆಪಿ ಗೆಲುವು ಸಾಧಿಸಿದೆ. 35 ವಾರ್ಡ್ಗಳ ಪೈಕಿ 18ರಲ್ಲಿ ಕಮಲ ಅಭ್ಯರ್ಥಿಗಳು ಜಯ ಗಳಿಸಿದ್ದು, ಕಾಂಗ್ರೆಸ್ ಕಾಂಗ್ರೆಸ್ 15 ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಮಾಜಿ ಸಚಿವ, ಶಾಸಕ ಹೆಚ್.ಕೆ. ಪಾಟೀಲ್ಗೆ ತವರು ಕ್ಷೇತ್ರದಲ್ಲೇ ಹಿನ್ನಡೆ ಉಂಟಾಗಿದೆ.
ಬಿಜೆಪಿ ಪ್ರಾಬಲ್ಯ:
ಅವಳಿ ನಗರದ ವಾರ್ಡ್ ನಂ.3ರಲ್ಲಿ ಮಾದುಸಾ ಮೇರವಾಡೆ, 5ರಲ್ಲಿ ಶಂಕರ್ ಕಾಕಿ, 7ರಲ್ಲಿ ರಾಘವೇಂದ್ರ ಯಳವತ್ತಿ, 11ರಲ್ಲಿ ಶ್ವೇತಾ ದಂಡಿನ 12ರಲ್ಲಿ ವಿಜಯಲಕ್ಷ್ಮೀ ದಿಂಡೂರ, 13ರಲ್ಲಿ ಗೂಳಪ್ಪ ಮುಶಿಗೇರಿ, 14ರಲ್ಲಿ ಪ್ರಕಾಶ ಅಂಗಡಿ, 15ರಲ್ಲಿ ಚಂದ್ರಶೇಖರ್ ತಡಸದ, 19ರಲ್ಲಿ ಮಹಾಂತೇಶ ನಲವಡಿ, 24ರಲ್ಲಿ ನಾಗರಾಜ ತಳವಾರ, 25ರಲ್ಲಿ ವಿನಾಯಕ ಮಾನ್ವಿ, 26ರಲ್ಲಿ ಹುಲಿಗೆಮ್ಮ ಹಬೀಬ, 28ರಲ್ಲಿ ಅನಿಲ್ ಅಬ್ಬಿಗೇರಿ, 31ರಲ್ಲಿ ಶೈಲಾ ಬಾಕಳೆ, 32ರಲ್ಲಿ ಸುನಂದಾ ಬಾಕಳೆ, 33ರಲ್ಲಿ ಅನಿತಾ ಗಡ್ಡಿ, 34ರಲ್ಲಿ ವಿದ್ಯಾವತಿ ಗಡಗಿ, ಹಾಗೂ 35ರಲ್ಲಿ ಉಷಾ ದಾಸರ ಸೇರಿ 18 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು ಒಲಿದಿದೆ.
ವಾರ್ಡ್ ನಂ 1ರಲ್ಲಿ ಲಕ್ಷ್ಮೀ ಸಿದ್ದಮ್ಮನಹಳ್ಳಿ, 2ರಲ್ಲಿ ಸುರೇಶ ಕಟ್ಟಿಮನಿ, 4ರಲ್ಲಿ ಶಕುಂತಲಾ ಅಕ್ಕಿ, 8ರಲ್ಲಿ ಪೂರ್ಣಿಮಾ ಬರದ್ವಾಡ, 6ರಲ್ಲಿ ಲಕ್ಷ್ಮವ್ವ ಭಜಂತ್ರಿ, 9ರಲ್ಲಿ ಚಂದ್ರು ಕರಿಸೋಮನಗೌಡ್ರ, 10ರಲ್ಲಿ ಇಮ್ತಿಯಾಜ್ ಶಿರಹಟ್ಟಿ, 16ರಲ್ಲಿ ಕೃಷ್ಣ ಪರಾಪೂರ, 18ರಲ್ಲಿ ಜೈನುಲಾಬ್ದಿನ್ ನಮಾಜಿ, 20ರಲ್ಲಿ ಪರವೀನಬಾಬು ಮುಲ್ಲಾ, 22ರಲ್ಲಿ ರವಿ ಕಮತರ, 23ರಲ್ಲಿ ಬರಕತ್ ಅಲಿ ಮುಲ್ಲಾ, 27ರಲ್ಲಿ ಲಲಿತಾ ಅಸೂಟಿ, 29ರಲ್ಲಿ ಲಕ್ಷ್ಮಣ ಚಂದಾವರಿ, 30ರಲ್ಲಿ ಪದ್ಮಾ ಕಟಗಿ ಸೇರಿ 15 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯ ದಾಖಲಿಸಿದ್ದಾರೆ.
ವಾರ್ಡ್ ನಂ.17ರಲ್ಲಿ ಆಸ್ಮಾ ರೇಶ್ಮಿ ಹಾಗೂ 21ನೇ ವಾರ್ಡಿನ ಮೈಬೂಬಸಾಬ ನದಾಫ್ ಪಕ್ಷೇತರ ಅಭ್ಯರ್ಥಿಗಳಾಗಿ ಜಯಭೇರಿ ಬಾರಿಸಿದ್ದಾರೆ. ಸರಳ ಬಹುಮತದ ಮೂಲಕ ಗದ್ದುಗೆ ಏರಿದೆ. ಸಚಿವರಾದ ಸಿಸಿ ಪಾಟೀಲ್, ಶ್ರೀರಾಮುಲು, ಪರಿಷತ್ ಸದಸ್ಯ ಎಸ್.ವಿ. ಸಂಕನೂರ್, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಭರ್ಜರಿ ಪ್ರಚಾರಕ್ಕೆ ಸಿಕ್ಕ ಫಲ ಸಿಕ್ಕಂತಾಗಿದೆ.
ಇದನ್ನೂ ಓದಿ:ಹಾವೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 'ಕೈ'ಮೇಲು: ಸಿಎಂ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗ