ಗದಗ:ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಅವರ ಹೆಸರಲ್ಲಿರುವ ಶಿಫಾರಸು ಪತ್ರವೊಂದು ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಯವರು ಕಾರ್ಯಕರ್ತನೊಬ್ಬನಿಗೆ ನೀಡಿದ್ದಾರೆ ಎನ್ನಲಾದ ಶಿಫಾರಸು ಪತ್ರದಲ್ಲಿ ಆತನ ವಾಹನವನ್ನು ಹಿಡಿಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದ ಜಿ ಬಸವರಾಜ್ ಅವರು ನನ್ನ ಮತಕ್ಷೇತ್ರ ಶಿರಹಟ್ಟಿ ವಿಧಾನಸಭಾ ವ್ತಾಪ್ತಿಗೆ ಒಳಪಟ್ಟಿರುತ್ತಾರೆ. ಸದರಿಯವರು ನಮ್ಮ ಪಕ್ಷದ ಕಾರ್ಯಕರ್ತರಾಗಿರುತ್ತಾರೆ ಮತ್ತು ನಮಗೆ ಚಿರಪರಿಚಿತರು. ಇವರು ಮಹೇಂದ್ರ ಬೊಲೆರೋ ವಾಹನ ಹೊಂದಿದ್ದು, ವಾಹನ ಸಂಖ್ಯೆ AP 39 V 3517 ಇದ್ದು, ಈ ವಾಹನವನ್ನು ಹಿಡಿಯಬಾರದು ಮತ್ತು ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಪತ್ರ ಬರೆದಿದ್ದಾರೆ.