ಕರ್ನಾಟಕ

karnataka

ETV Bharat / state

ನಾಡಗೀತೆ ವೇಳೆ ಪುಸ್ತಕ ಓದುತ್ತಾ ನಿಂತ ಶಾಸಕ: ರಾಮಣ್ಣ ಲಮಾಣಿ ನಡೆಗೆ ಟೀಕೆ

ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ನಡೆದ ರಾಜ್ಯ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಯಲ್ಲಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ನಾಡಗೀತೆಗೆ ಅಗೌರವ ತೋರಿರುವ ಘಟನೆ ನಡೆದಿದೆ.

ಕೆಡಿಪಿ ಸಭೆಯಲ್ಲಿ ನಾಡ ಗೀತೆಗೆ ಶಾಸಕನಿಂದ ಅಗೌರವ...

By

Published : Nov 12, 2019, 10:39 AM IST

Updated : Nov 12, 2019, 10:51 AM IST

ಗದಗ: ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ನಾಡಗೀತೆಗೆ ಅಗೌರವ ತೋರಿರುವ ಘಟನೆ ಇಂದು ನಡೆದಿದೆ.

ಕೆಡಿಪಿ ಸಭೆಯ ವೇಳೆ ನಾಡಗೀತೆಗೆ ಶಾಸಕ ರಾಮಪ್ಪ ಲಮಾಣಿ ಅಗೌರವ

ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ನೇತೃತ್ವದಲ್ಲಿ ಕೆಡಿಪಿ ಸಭೆ ಆಯೋಜನೆ ಮಾಡಲಾಗಿತ್ತು. ಸಭೆಯ ಆರಂಭದಲ್ಲಿ ನಾಡಗೀತೆ ಹಾಡುವ ವೇಳೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಪುಸ್ತಕ ಓದಿಕೊಂಡು ನಿಂತಿರುವುದು ಕಂಡು ಬಂದಿದೆ. ಹೀಗಾಗಿ ಜನಪ್ರತಿನಿಧಿಯ ನಡೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಾದ ಹೆಚ್.ಕೆ. ಪಾಟೀಲ್, ಕಳಕಪ್ಪ ಬಂಡಿ ಭಾಗವಹಿಸಿದ್ದರು.

Last Updated : Nov 12, 2019, 10:51 AM IST

ABOUT THE AUTHOR

...view details