ಕರ್ನಾಟಕ

karnataka

ETV Bharat / state

ಸಿಎಂ ಬದಲಾವಣೆ ಗೊಂದಲ ಗಲಾಟೆಯಲ್ಲಿ ಬಿಜೆಪಿಗರು ತಲ್ಲೀನರಾಗಿದ್ದಾರೆ: ಹೆಚ್.ಕೆ.ಪಾಟೀಲ್ ವ್ಯಂಗ್ಯ - ನಾಯಕತ್ವ ಬದಲಾವಣೆ

ಕೇವಲ ಪಕ್ಷದ ಕಿತ್ತಾಟದಲ್ಲಿ ಗಮನ ಹರಿಸಿ ಸರ್ಕಾರ ನಿಸ್ತೇಜವಾಗಿದೆ. ಇದು ರಾಜ್ಯದ ಜನತೆಗೆ ಸರ್ಕಾರ ಮಾಡುವ ದ್ರೋಹ. ಪೆಟ್ರೋಲ್, ಡೀಸೆಲ್, ಗೊಬ್ಬರ ಮತ್ತು ದಿನಸಿ ಬೆಲೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಈ ಸಮಸ್ಯೆಯತ್ತ ಸಂಪೂರ್ಣ ಗಮನ ಹರಿಸಬೇಕು. ಆದರೆ, ಬಿಜೆಪಿಗರು ಸರ್ಕಾರವನ್ನ ಬೀಳಿಸಲು ಓಡಾಡುತ್ತಿದ್ದಾರೆ ಎಂದು ಶಾಸಕ ಹೆಚ್​.ಕೆ. ಪಾಟೀಲ್​ ಆಕ್ರೋಶ ವ್ಯಕ್ತಪಡಿಸಿದರು.

bjp-leaders-are-busy-in-changing-cm
ಶಾಸಕ ಹೆಚ್​ಕೆ ಪಾಟೀಲ್

By

Published : Jun 10, 2021, 8:40 PM IST

ಗದಗ: ಮುಖ್ಯಮಂತ್ರಿ ಬದಲಾವಣೆಯ ಗೊಂದಲ, ಗಲಾಟೆಯಲ್ಲಿ ಬಿಜೆಪಿಯವರಿದ್ದಾರೆ. ಮೂರನೇ ಅಲೆ ದೊಡ್ಡ ಸವಾಲಾಗಿ ಬರುತ್ತಿದೆ, ಅವರಿಗೆ ಅದರ ಪರಿವೆಯೇ ಇಲ್ಲ, ಸಿಎಂ ಬದಲಾವಣೆಯ ಭರಾಟೆಯಲ್ಲಿ ಮುಳುಗಿದ್ದಾರೆ ಎಂದು ಶಾಸಕ ಹೆಚ್.ಕೆ.ಪಾಟೀಲ್ ಕಿಡಿ ಕಾರಿದ್ದಾರೆ.

ಸಿಎಂ ಬದಲಾವಣೆ ಗೊಂದಲ ಗಲಾಟೆಯಲ್ಲಿ ಬಿಜೆಪಿಗರು ತಲ್ಲೀನರಾಗಿದ್ದಾರೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅವರ ಆಂತರಿಕ ವಿಚಾರ ಆದರೂ ಇಂಥ ಸಂದರ್ಭದಲ್ಲಿ ಎಲ್ಲವನ್ನೂ ಬದಿಗೊತ್ತಿ ಕೆಲಸ ಮಾಡಬೇಕು. ಕೇವಲ ಪಕ್ಷದ ಕಿತ್ತಾಟದಲ್ಲಿ ಗಮನ ಹರಿಸಿ ಸರ್ಕಾರ ನಿಸ್ತೇಜವಾಗಿದೆ. ಪೆಟ್ರೋಲ್, ಡೀಸೆಲ್, ಗೊಬ್ಬರ ದರ ಹಾಗೂ ದಿನಸಿ ಬೆಲೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಸಹಿ ಸಂಗ್ರಹ, ನಾಯಕತ್ವ ಬದಲಾವಣೆ ಮಾಡಲು ಓಡಾಡುತ್ತಿದ್ದಾರೆ. ಇದು ಜನಪರ ಕಳಕಳಿ ಇಲ್ಲ ಅನ್ನೋದನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ಉಚಿತ ವ್ಯಾಕ್ಸಿನ್​ಗೆ ಹಣ ಕೊಟ್ಟರೆ ಏನು ತೊಂದರೆ

ವ್ಯಾಕ್ಸಿನೇಷನ್​ಗೆ ಕಾಂಗ್ರೆಸ್ 100 ಕೋಟಿ ರೂ. ನೀಡುವುದನ್ನು ರಾಜ್ಯ ಸರ್ಕಾರ ನಿರಾಕರಿಸಿದ ವಿಚಾರವಾಗಿ ಮಾತನಾಡಿದ ಅವರು, ಸಕಾರಾತ್ಮಕವಾಗಿ ನಿರ್ಣಯ ತೆಗೆದುಕೊಳ್ಳಲಾರಂತಹ ತೀರ್ಮಾನ ಅಮಾನವೀಯ. ಶಾಸಕರ ಹಣದಲೋ, ಸ್ವಂತ ಹಣದಲ್ಲೋ ಅಥವಾ ಮನೆ ಮಾರಿಕೊಟ್ಟರೇನು ಉಚಿತ ವ್ಯಾಕ್ಸಿನೇಷನ್​ ನೀಡುವುದು ಬಲು ಮುಖ್ಯ, ಆದರೆ, ಸರ್ಕಾರ ಈ ನಿರ್ಧಾರವನ್ನು ತಿರಸ್ಕಾರ ಮಾಡಿದ್ದು, ಒಳ್ಳೆಯ ನಡೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details