ಗದಗ: ಕೊರೊನಾ ಎಫೆಕ್ಟ್ ಹಿನ್ನೆಲೆ ಜಿಲ್ಲೆಯಲ್ಲಿ ತತ್ತರಿಸಿದ ಜನರಿಗೆ ನೆರವಾಗಲು ಬಿಜೆಪಿಯ ಮುಖಂಡ ಅನಿಲ್ ಮೆಣಸಿನಕಾಯಿ ಅವರು ಭಿಕ್ಷಾಟನೆಗೆ ಇಳಿದಿದ್ದಾರೆ.
ನಗರದ ಎಪಿಎಂಸಿ ಆವರಣದಲ್ಲಿ ಬಿಕ್ಷಾಟನೆ ನಡೆಸಿದ ಮೆಣಸಿನಕಾಯಿ ಅವರು ರೈತರಿಂದ ದವಸ- ಧಾನ್ಯಗಳು, ರೊಟ್ಟಿ ಸೇರಿದಂತೆ ಇತರೆ ವಸ್ತುಗಳನ್ನು ಸ್ವೀಕರಿಸಿದ್ದಾರೆ.
ಗದಗನಲ್ಲಿ ಸಂಕಷ್ಟದಲ್ಲಿ ಇರುವವರಿಗೆ ನೆರವಾಗಲು ಭಿಕ್ಷಾಟನೆಗೆ ಇಳಿದ ಬಿಜೆಪಿ ಮುಖಂಡ ಕ್ಷೇತ್ರದ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಓಡಾಡಿ ಅಲ್ಲಿನ ರೈತರಿಂದ ದವಸ- ಧಾನ್ಯ, ರೊಟ್ಟಿಯನ್ನು ಭಿಕ್ಷೆಯಾಗಿ ಪಡೆದು, ಅದನ್ನು ಊಟಕ್ಕೂ ಪರದಾಡುತ್ತಿರುವ ಕುಟುಂಬಗಳಿಗೆ ತಲುಪಿಸಲು ಶ್ರಮಿಸುತ್ತಿದ್ದಾರೆ.
ಭಿಕ್ಷಾಟನೆ ಕಾರ್ಯಕ್ರಮಕ್ಕೆ ಸಚಿವ ಸಿಸಿ ಪಾಟೀಲ್ ಅವರು ಚಾಲನೆ ನೀಡಿ, ಬೆಂಬಲಿಸಿದರು.