ಗದಗ:ಬೆಟಗೇರಿ ನಗರಸಭೆ ಫಲಿತಾಂಶ ಭಾರಿ ಅಚ್ಛರಿ ಮೂಡಿಸಿದೆ. ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸಿದ ಬಿಜೆಪಿ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಲವು ದಶಕಗಳ ಬಳಿಕ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿ ಗದಗ ಬೆಟಗೇರಿ ನಗರಸಭೆಯನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
35 ವಾರ್ಡ್ಗಳ ಪೈಕಿ 18 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಬಿಜೆಪಿ ಸರಳ ಬಹುಮತ ಪಡೆದುಕೊಂಡಿದೆ. ಕೊನೆಯ ಹಂತದವರೆಗೂ ಭಾರಿ ಕುತೂಹಲ ಮೂಡಿಸಿದ್ದ ಫಲಿತಾಂಶದಲ್ಲಿ ಬಿಜೆಪಿ ಗೆದ್ದು ಬೀಗಿದೆ.
ಬಿಜೆಪಿ 17, ಕಾಂಗ್ರೆಸ್ 15, ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಪೈಕಿ ಇಬ್ಬರು ಗೆಲುವು ಪಡೆದಿದ್ದಾರೆ. ಇದಲ್ಲದೇ, ಕೊನೆ ಗಳಿಗೆಯಲ್ಲಿ 35ನೇ ವಾರ್ಡ್ನ ಎಸ್ಸಿ ಮೀಸಲು ಮಹಿಳಾ ಅಭ್ಯರ್ಥಿಯ ಗೆಲುವು ಭಾರಿ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಬಿಜೆಪಿ ಅಭ್ಯರ್ಥಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು.