ಕರ್ನಾಟಕ

karnataka

ETV Bharat / state

ಮುಂಡರಗಿ ಪುರಸಭೆಯಲ್ಲಿ ಜಟಾಪಟಿ: ಕುರ್ಚಿ ಎಸೆದು ಕಾಂಗ್ರೆಸ್​ ಸದಸ್ಯನ ಆಕ್ರೋಶ

ಮುಂಡರಗಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್​​ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆದಿದೆ. ಸಭೆಯಲ್ಲಿ ಕಾಂಗ್ರೆಸ್​​ ಸದಸ್ಯರೊಬ್ಬರು ಕುರ್ಚಿ ​ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Purasabe
ಸಭೆಯಲ್ಲಿ ಸದಸ್ಯರ ಜಗಳ

By

Published : Sep 30, 2022, 9:53 AM IST

ಗದಗ: ಜಿಲ್ಲೆಯ ಮುಂಡರಗಿ ಪುರಸಭೆಯ ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ನಡುವೆ ಗಲಾಟೆ ನಡೆದಿದ್ದು ಕಾಂಗ್ರೆಸ್​​ ಸದಸ್ಯರೊಬ್ಬರು ಕುರ್ಚಿ ಎಸೆಯುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿರುವ ಘಟನೆ ನಡೆದಿದೆ.

ಪುರಸಭೆಯ ಸ್ಟ್ಯಾಂಡಿಂಗ್ ಕಮೀಟಿ ಚೇರ್ಮನ್ ಆಯ್ಕೆ ವಿಚಾರವಾಗಿ ಪುರಸಭೆಯ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಅವರು ಏಕಪಕ್ಷೀಯ, ಸರ್ವಾಧಿಕಾರಿ ದೋರಣೆ ಮಾಡುತ್ತಿದ್ದಾರೆ ಉಳಿದ ಸದಸ್ಯರ ಗಮನಕ್ಕೆ ತರದೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾಂಗ್ರೆಸ್​​ ಪಕ್ಷದ ಸದಸ್ಯರು ಆರೋಪವನ್ನ ಮಾಡುತ್ತಿದ್ದರು. ಸ್ಟ್ಯಾಂಡಿಂಗ್ ಕಮೀಟಿಯ ಚೇರ್ಮನ್​ರನ್ನ ಅಧ್ಯಕ್ಷರು ದಿಢೀರ್ ಅಂತ ಆಯ್ಕೆ ಮಾಡಿದ್ದಾರೆ ಇದು ನಿಯಮ ಬಾಹಿರ ಎಂದು ಸದಸ್ಯರು ತಗಾದೆ ತೆಗೆದಿದ್ದಾರೆ.

ಪುರಸಭೆಯಲ್ಲಿ ಸದಸ್ಯರ ಜಗಳ

ಈ ವೇಳೆ ಕಾಂಗ್ರೆಸ್ ಸದಸ್ಯ ರಾಜಾಭಕ್ಷಿ ಉಳಿದ ಕಾಂಗ್ರೆಸ್ ಸದಸ್ಯರ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ. ಪುರಸಭೆಯ ಅಧ್ಯಕ್ಷೆಯ ನಿರ್ಧಾರ ಸರಿಯಿದೆ ಅದನ್ನ ಪ್ರಶ್ನೆ ಮಾಡುವಂತಿಲ್ಲ ಅಂತ ತಮ್ಮ ಪಕ್ಷದ ಸದಸ್ಯರ ಜೊತೆಗೆ ವಾಗ್ವಾದಕ್ಕಿಳಿದು ಕುರ್ಚಿ ಎಸೆದಾಡಿದ್ದಾರೆ. ಸಭೆಯಲ್ಲಿ ಪುರಸಭೆಯ ಒಟ್ಟು ಸದಸ್ಯರ ಪೈಕಿ‌ 6 ಜನ ಕಾಂಗ್ರೆಸ್ ಸದಸ್ಯರು ಹಾಗೂ ಉಳಿದ 14 ಜನ ಸದಸ್ಯರು ಬಿಜೆಪಿಯವರಿದ್ದರು.

ಇದನ್ನೂ ಓದಿ:ಇಂದು ಭಾರತ್​ ಜೋಡೋ ಯಾತ್ರೆ ರಾಜ್ಯ ಪ್ರವೇಶ: ಗುಂಡ್ಲುಪೇಟೆಯಲ್ಲಿ ಖಾಕಿ ಹೈ ಅಲರ್ಟ್

ABOUT THE AUTHOR

...view details