ಗದಗ :ಬಿಟ್ ಕಾಯಿನ್ ಪ್ರಕರಣದಲ್ಲಿ ಇನ್ನೂ ಸಿಎಂ ಹೆಸರು ಎಲ್ಲೂ ಪ್ರಸ್ತಾಪ ಆಗಿಲ್ಲ, ರಾಜಕಾರಣಿಗಳು ಎಂದು ಮಾತ್ರ ಹೇಳಿದ್ದಾರೆ. ಆದರೆ ತನಿಖೆಯಲ್ಲಿ ಯಾರ ಹೆಸರು ಬರುತ್ತದೋ ಅವರಿಗೆ ದೇಶದ ಕಾನೂನಿನಂತೆ ಶಿಕ್ಷೆಯಾಗಲಿ ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ ಹೇಳಿದ್ದಾರೆ.
ಗದಗದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣದಲ್ಲಿ ರಾಜಕಾರಣಿಗಳು ಅಂತ ಮಾತ್ರ ಹೇಳಿದ್ದಾರೆ. ಎಲ್ಲೂ ಸಿಎಂ ಹೆಸರು ಪ್ರಸ್ತಾಪಿಸಿಲ್ಲ. ಒಂದು ವೇಳೆ ತನಿಖೆಯಲ್ಲಿ ಅವರ ಹೆಸರಾಗಲಿ ಅಥವಾ ಅವರು ಕುಟುಂಬದವರ ಹೆಸರಾಗಲಿ ಅಥವಾ ಯಾವುದೇ ರಾಜಕಾರಣಿಗಳು, ಪ್ರಭಾವಿಗಳು ಹೆಸರೇ ಬರಲಿ, ಅವರು ಕಾರಣೀಭೂತರಾಗುತ್ತಾರೆ. ಈ ದೇಶದ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.
ಇನ್ನು ಈ ಪ್ರಕರಣಗಳಲ್ಲಿ ಕಾಂಗ್ರೆಸ್ನವರೇ ಸಿಎಂ ಹೆಸರಿದೆ ಎಂದು ಆರೋಪಿಸುತ್ತಿದ್ದಾರೆ ಎಂದಿದ್ದಕ್ಕೆ ನನಗೆ ಮಾಹಿತಿಯಿಲ್ಲ. ಊಹಪೋಹಗಳಿಗೆ ನಾನು ಪ್ರತಿಕ್ರಿಯಿಸಲ್ಲ ಎಂದರು. ಈಗಾಗಲೇ ಪೊಲೀಸರು ತನಿಖೆ ನಡೆಸಿದ್ದಾರೆ. ಬಿಟ್ ಕಾಯಿನ್ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಯಾರ್ಯಾರ ಹೆಸರು ಬಾಯಿ ಬಿಟ್ಟಿದ್ದಾನೆ. ಎಲ್ಲವೂ ಬಹಿರಂಗ ಪಡಿಸಬೇಕು ಅಂತ ಒತ್ತಾಯ ಮಾಡಿದರು. ಈಗ ಬಹಿರಂಗ ಮಾಡದೇ ಯಾವಾಗ ಭಹಿರಂಗ ಮಾಡ್ತಾರೆ. ಕೇಂದ್ರ ತನಿಖಾ ಏಜನ್ಸಿ ಮೇಲೆ ನಂಬಿಕೆ ಇಲ್ಲ. ಸಾರ್ವಜನಿಕರಿಗೆ, ದೇಶಕ್ಕೆ ಗೊತ್ತಾಗಬೇಕು, ಹಾಗಾಗಿ ಪ್ರಕರಣದ ಆರೋಪಿಗಳನ್ನ ಭಹಿರಂಗ ಮಾಡಲಿ ಎಂದು ಹೇಳಿದರು.