ಗದಗ : ದ್ವಿಚಕ್ರ ವಾಹನವೊಂದು ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬಂದ ಮತ್ತೊಂದು ಬೈಕ್ಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರರಿಬ್ಬರು ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಲಾರಿ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರರಿಬ್ಬರು ದುರ್ಮರಣ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೆಣ್ಣಿಹಳ್ಳದ ಬಳಿ ಘಟನೆ ನಡೆದಿದೆ. ಮೃತರನ್ನು ಮುಂಡರಗಿ ತಾಲೂಕಿನ ಬಸಾಪೂರ ಗ್ರಾಮದ ಫಕೀರಪ್ಪ ಭೀಮಣ್ಣ ಇದ್ಲಿ (38), ಹನುಮಂತ ಪ್ರಕಾಶಪ್ಪ ಇದ್ಲಿ(40) ಎಂದು ಗುರುತಿಸಲಾಗಿದೆ.
ಇನ್ನೊಂದು ದ್ವಿಚಕ್ರ ವಾಹನದ ಸವಾರರಾದ ಕೋರ್ಲಹಳ್ಳಿ ಗ್ರಾಮದ ದಾವಲಸಾಬ ಖಾಸೀಮಸಾಬ ಹಣಗಿ (26), ಲಾಲಸಾಬ ಮಾಬುಸಾಬ ಹಣಗಿ ಹಂಚಿನಾಳ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಸ್ಥಳಕ್ಕೆ ಮುಂಡರಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ:ಪೂಜಾರಹಳ್ಳಿ ಕೆರೆ ಮೇಲೆ ಭೂ ನುಂಗಣ್ಣರ ವಕ್ರದೃಷ್ಟಿ.. ಸಿಡಿದೆದ್ದ ಗ್ರಾಮಸ್ಥರು!