ಕರ್ನಾಟಕ

karnataka

ETV Bharat / state

ಕೆಎಸ್​ಆರ್​ಟಿಸಿ ಬಸ್​ ಅಡ್ಡಗಟ್ಟಿ ಚಾಲಕನಿಗೆ ಧಮ್ಕಿ ಹಾಕಿದ ಬೈಕ್​ ಸವಾರರು - ಅವಾಜ್

ಕೆಎಸ್​ಆರ್​ಟಿಸಿ ಬಸ್ ಚಾಲಕನಿಗೆ ಕುಡಿದ ಮತ್ತಿನಲ್ಲಿ ಬೈಕ್ ಸವಾರ ಹಾಗೂ ಆತನ‌ ಸ್ನೇಹಿತರು ಬಸ್ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಗದಗ‌ ಜಿಲ್ಲೆಯ ನರಗುಂದ ಸಮೀಪ ನಡೆದಿದೆ.

ಧಮ್ಕಿ

By

Published : Sep 11, 2019, 1:31 PM IST

ಗದಗ‌: ಕೆಎಸ್​ಆರ್​ಟಿಸಿ ಬಸ್ ಚಾಲಕನಿಗೆ ಕುಡಿದ ಮತ್ತಿನಲ್ಲಿ ಬೈಕ್ ಸವಾರ ಹಾಗೂ ಆತನ‌ ಸ್ನೇಹಿತರು ಬಸ್ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಾಜ್ ಹಾಕಿರೋ ಘಟನೆ ಗದಗ‌ ಜಿಲ್ಲೆಯ ನರಗುಂದ ಸಮೀಪ ನಡೆದಿದೆ.

ಕೆಎಸ್​ಆರ್​ಟಿಸಿ ಬಸ್​ ಅಡ್ಡಗಟ್ಟಿ ಚಾಲಕನಿಗೆ ಧಮ್ಕಿ ಹಾಕಿದ ಬೈಕ್​ ಸವಾರರು

ಧಾರವಾಡ ಡಿಫೋಗೆ ಸೇರಿದ ಬಸ್ ಸಂಚರಿಸುವಾಗ ಅದೇ ಮಾರ್ಗದಲ್ಲಿ 2 ಬೈಕ್‌ ನಲ್ಲಿದ್ದ ಯುವಕರು ಕುಡಿದು ಬೈಕ್ ಚಲಾಯಿಸುವಾಗ ಬಸ್​ಗೆ ಸೈಡ್ ಕೊಡದೇ ತೊಂದರೆ ಕೊಡೋ ಮೂಲಕ ಬೈಕ್ ಸವಾರಿ ಮಾಡ್ತಿದ್ದ ಯುವಕರಿಗೆ ಬಸ್ ಕಂಡಕ್ಟರ್ ಸೈಡ್ ಸರಿಯುವಂತೆ ಹಾರನ್ ಹಾಕಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ಬೈಕ್ ಸವಾರರು ಕ್ಯಾತೆ ತೆಗೆದು ಹಾರನ್ ಹಾಕ್ತಿಯಾ ಹಾಕು ಬಾ ಅಂತ ಬಸ್ ಕಂಡಕ್ಟರ್​​ನನ್ನು ಹಾಗೂ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇತ್ತ ಬುದ್ದಿ ಹೇಳಲು ಬಂದ ಪ್ರಯಾಣಿಕರಿಗೂ ಸಹ ಆವಾಜ್ ಹಾಕಿ ಚಾಲಕ ಹಾಗೂ ನಿರ್ವಾಹಕನ ಮೇಲೆ ತಮ್ಮ ದರ್ಪ ತೋರಿದ್ದಾರೆ. ಇನ್ನೂ ಬಸ್ ಹತ್ತಿ ಒಳಗೂ ಪ್ರವೇಶಿಸಿದ ಬೈಕ್ ಸವಾರ ರೌಡಿಸಂ ಪ್ರದರ್ಶನ ಮಾಡಿದ್ದಾನೆ.

ಗದಗ ಜಿಲ್ಲೆಯ ನರಗುಂದದ ಬಳಿ ಈ ಘಟನೆ ನಡೆದಿದ್ದು, ಬಸ್​ನಲ್ಲಿದ್ದ ಪ್ರಯಾಣಿಕರೊಬ್ಬರು ಈ ಘಟನೆಯನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸುಖಾ ಸುಮ್ಮನೆ ತೊಂದರೆ ಕೊಡೋ ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ABOUT THE AUTHOR

...view details