ಗದಗ:ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಯುವತಿ ಸಾವನ್ನಪ್ಪಿರುವ ಘಟನೆ ನರಗುಂದ ಪಟ್ಟಣದಲ್ಲಿ ನಡೆದಿದೆ.
ಬೈಕ್ ಮೇಲೆ ಪ್ರವಾಸಕ್ಕೆ ಬಂದಿದ್ದ ಜೋಡಿ: ಅಪಘಾತದಲ್ಲಿ ಯುವತಿ ಸಾವು - ನರಗುಂದ ಪಟ್ಟಣದಲ್ಲಿ ರಸ್ತೆಯ ಡಿವೈಡರ್ಗೆ ಬೈಕ್ ಡಿಕ್ಕಿ
ರಸ್ತೆಯ ಡಿವೈಡರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಯುವತಿ ಸಾವನ್ನಪ್ಪಿರುವ ಘಟನೆ ನರಗುಂದ ಪಟ್ಟಣದಲ್ಲಿ ನಡೆದಿದೆ.
![ಬೈಕ್ ಮೇಲೆ ಪ್ರವಾಸಕ್ಕೆ ಬಂದಿದ್ದ ಜೋಡಿ: ಅಪಘಾತದಲ್ಲಿ ಯುವತಿ ಸಾವು ರಸ್ತೆಯ ಡಿವೈಡರ್ಗೆ ಬೈಕ್ ಡಿಕ್ಕಿ ಯುವತಿ ಸಾವು](https://etvbharatimages.akamaized.net/etvbharat/prod-images/768-512-5459742-thumbnail-3x2-smk.jpg)
ರಸ್ತೆಯ ಡಿವೈಡರ್ಗೆ ಬೈಕ್ ಡಿಕ್ಕಿ ಯುವತಿ ಸಾವು
ಮಹಾರಾಷ್ಟ್ರದ ಪೂನಾ ಮೂಲದ ರತ್ನಮಾಲಾ (20) ಎಂಬ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ನಿಖಿಲ್ (20)ಗೆ ಗಂಭೀರ ಗಾಯಗಳಾಗಿವೆ.
ಈ ಇಬ್ಬರು ಬೈಕ್ ಮೇಲೆ ಕರ್ನಾಟಕಕ್ಕೆ ಪ್ರವಾಸಕ್ಕೆಂದು ಬಂದಿರುವ ಬಗ್ಗೆ ಮಾಹಿತಿ ಇದ್ದು, ಹಂಪಿಯಿಂದ ನರಗುಂದ ಮಾರ್ಗವಾಗಿ ಪೂನಾಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಗಾಯಾಳು ಯುವಕನನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.