ಗದಗ: ನಗರದ ಜಿಮ್ಸ್ ಆಸ್ಪತ್ರೆ ಹಾಸಿಗೆಗಳು ಭರ್ತಿಯಾದ ಕಾರಣ ಇತರ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದರು.
ಬೆಡ್ಗಳ ಬೇಡಿಕೆ ಸೃಷ್ಟಿಯಾಗುತ್ತಿದ್ದಂತೆ ನಗರದ ಪಶು ವೈದ್ಯಕೀಯ ಹಾಗೂ ಆಯುಷ್ಯ ಆಸ್ಪತ್ರೆಯಲ್ಲಿ 200 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ವೈದ್ಯರ ಕೊರತೆ ನಿಗಿಸಲು ನಿವೃತ್ತ ಮತ್ತು ಬಿಎಂಎಸ್ಎಸ್ ವೈದ್ಯರ ನೇಮಕಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ಪಶು ವೈದ್ಯಕೀಯ, ಆಯುಷ್ಯ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್ ವ್ಯವಸ್ಥೆ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ವೆಂಟಿಲೇಟರ್ ಬೆಡ್ಗಳ ಅಭಾವ ತಿಳಿದು ಬಂದ ತಕ್ಷಣವೇ ಸಿಎಂ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದೆ. ಇದರಿಂದ ಜಿಮ್ಸ್ ಆಸ್ಪತ್ರೆಗೆ ಹೆಚ್ಚುವರಿ 50 ಹೊಸ ವೆಂಟಿಲೇಟರ್ ಬಂದಿವೆ. ಈಗ ಜೋಡಣೆ ಕಾರ್ಯ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಚಿಕಿತ್ಸೆಗೆ ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.
ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ. ಸಿಎಸ್ಆರ್ ಅನುದಾನದಲ್ಲಿ ಆಮ್ಲಜನಕ ಘಟಕವೂ ನೀಡುವಂತೆ ಕೋರಿದ್ದೆ. ಒಂದು ನಿಮಿಷಕ್ಕೆ ಸಾವಿರ ಲಿಟಲ್ ತಯಾರಿಕೆ ಘಟಕಕ್ಕೆ ಆದೇಶಿಸಿದ್ದಾರೆ. 3000 ಲಿಟಲ್ ಸಾಮರ್ಥ್ಯ ಇನ್ನೊಂದು ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರದ ಅನುಮತಿ ಸಿಗಲಿದೆ. ಮುಂಬರುವ ದಿನಗಳಲ್ಲಿ ಹೇರಳವಾಗಿ ಆಕ್ಸಿಜನ್ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.