ಕರ್ನಾಟಕ

karnataka

ETV Bharat / state

ಶ್ರೀಬನಶಂಕರಿ ದೇವಿ ರಥೋತ್ಸವಕ್ಕೆ ಹಗ್ಗ ಕೊಂಡೊಯ್ದ ಎತ್ತು ಹೃದಯಾಘಾತದಿಂದ ಸಾವು.. - ಹಗ್ಗ ಕೊಂಡೊಯ್ದಿದ್ದ ಎತ್ತು ಹೃದಯಾಘಾತದಿಂದ ಸಾವು

ಸುಮಾರು 15 ಕ್ವಿಂಟಾಲ್​ಗೂ ಅಧಿಕ ಬಾರದ ಹಗ್ಗವನ್ನು ಹೊತ್ತು ಮಲಪ್ರಭಾ ನದಿ ದಾಟಿದ್ದ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಅನ್ನಪ್ಪ ಮೇಟಿ ಎಂಬುವರಿಗೆ ಸೇರಿದ ಎತ್ತು ಇಂದು ಸಾವನ್ನಪ್ಪಿದೆ.

ಎತ್ತು ಹೃದಯಾಘಾತದಿಂದ ಸಾವು
ox died of a heart attack at Gadag

By

Published : Jan 13, 2020, 5:19 PM IST

ಗದಗ : ಬಾದಾಮಿಯ ಶ್ರೀಬನಶಂಕರಿ ದೇವಿಯ ರಥೋತ್ಸವಕ್ಕೆ ಹಗ್ಗ ತೆಗೆದುಕೊಂಡು ಹೋಗಿದ್ದ ಎತ್ತೊಂದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಎತ್ತು ಹೃದಯಾಘಾತದಿಂದ ಸಾವು

ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಅನ್ನಪ್ಪ ಮೇಟಿ ಎಂಬುವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ಶ್ರೀ ಬನಶಂಕರಿಯ ರಥೋತ್ಸವ ಮುಗಿದು ವಾಪಸ್​ ಬರುವಾಗ ಎತ್ತು ಹೃದಯಾಘಾತದಿಂದ ಸಾವನ್ನಪ್ಪಿದೆ.‌

18ನೇ ಶತಮಾನದಿಂದ ಬನಶಂಕರಿ ದೇವಿಯ ರಥಕ್ಕೆ ಮಾಡಲಗೇರಿ ಗ್ರಾಮದಿಂದಲೇ ಹಗ್ಗ ಪೂರೈಸುವೆ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ 15 ಕ್ವಿಂಟಾಲ್​ಗೂ ಅಧಿಕ ಬಾರದ ಹಗ್ಗವನ್ನು ಹೊತ್ತುಕೊಂಡು ಮಲಪ್ರಭಾ ನದಿ ದಾಟಿತ್ತು. ಆದರೆ, ಇದೀಗ ರಥೋತ್ಸವದ ಕಾರ್ಯ ಮುಗಿಸಿ ವಾಪಸ್‌ ಆಗುವಾಗ ಎತ್ತು ಸಾವನ್ನಪ್ಪಿರುವುದು ಮಾಡಲಗೇರಿ ಗ್ರಾಮಸ್ಥರಲ್ಲಿ ದುಃಖ ಮನೆ ಮಾಡಿದೆ.

ABOUT THE AUTHOR

...view details