ಗದಗ: ಒಂದೆಡೆ ತರಕಾರಿ ಬೆಲೆಗಳು ಗಗನಕ್ಕೇರಿರುವುದು ರೈತರಿಗೆ ಸ್ವಲ್ಪ ಸಂತಸ ತಂದಿದೆ. ಜಿಲ್ಲೆಯಲ್ಲಿ ಬಾಳೆ ಬೆಳೆದ್ರೆ ಬಾಳು ಬಂಗಾರವಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ ಹಿನ್ನೆಲೆ ಇಲ್ಲಿನ ಬಹುತೇಕ ರೈತರು ಬಾಳೆಕಾಯಿ ಬೆಳೆದಿದ್ದಾರೆ. ಆದ್ರೆ ಇದೀಗ ಬೆಲೆ ಪಾತಾಳಕ್ಕೆ ಕುಸಿದಿದ್ದು, ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ.
ಗದಗ ಜಿಲ್ಲೆಯಲ್ಲಿ ನೂರಾರು ಎಕರೆ ಬಾಳೆ ಬೆಳೆದಿದ್ದಾರೆ. ಈ ಬಾರಿ ಫಸಲು ಸಹ ಉತ್ತಮವಾಗಿದೆ. ಸದ್ಯಕ್ಕೆ ಬಾಳೆ ಕಟಾವಿಗೆ ಬಂದಿದ್ದು, ತೋಟದಲ್ಲಿ 50 ರಿಂದ 60 ಕೆ.ಜಿಯ ಬೃಹತ್ ಗಾತ್ರದ ಬಾಳೆಗೊನೆಗಳು ಕೊಳೆಯಲು ಪ್ರಾರಂಭಿಸಿವೆ. ಮಾರುಕಟ್ಟೆಯಲ್ಲಿ ಬಾಳೆ ಹಣ್ಣು ಡಜನ್ಗೆ 30-40 ರೂಪಾಯಿಗೆ ಮಾರಾಟವಾಗುತ್ತಿದೆ. ಆದ್ರೆ ನಾವು ಮಾರುಕಟ್ಟೆಗೆ ಬಾಳೆಕಾಯಿ ತಂದ್ರೆ ದಲ್ಲಾಳಿಗಳು ಕೆಜಿಗೆ 3-4 ರೂ. ಕೇಳುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.