ಗದಗ :ಸೀಲ್‌ಡೌನ್ ಆಗಿರುವ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮಸ್ಥರಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ. ಕುಡಿಯಲು ತೊಟ್ಟು ನೀರಿಲ್ಲದೆ ಜನ ಪರದಾಡುತ್ತಿದ್ದಾರೆ.
ಮುಂಡರಗಿ ಪಶುಸಂಗೋಪನಾ ಇಲಾಖೆಯಲ್ಲಿ ವಾಚ್‌ಮ್ಯಾನ್ ಆಗಿ ಕಾರ್ಯನಿರ್ಹಿಸುತ್ತಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಬಾಲೆಹೊಸರು ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.
ಸೀಲ್‌ಡೌನ್ ಮಾಡಿ ಮರೆಯಾದ ಅಧಿಕಾರಿಗಳು ಜನ ಹೊರಗೆ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಆದರೆ, ಜನರಿಗೆ ಮೂಲಸೌಕರ್ಯಕ್ಕೆ ಕೊರತೆ ಉಂಟಾಗಿದೆ. ಈ ಕುರಿತು ಜನರು ಶಿರಹಟ್ಟಿ ಶಾಸಕ ಲಮಾಣಿ ಅವರಿಗೆ ಕರೆ ಮಾಡಿ ಕೇಳಿದ್ರೆ, ಎಲ್ಲಾ ಕಡೆ ಬಂದಿದೆ, ಮನೆಯಲ್ಲಿಯೇ ಇರಿ ಎಂದು ಹೇಳುತ್ತಿದ್ದಾರೆ. ತಹಶೀಲ್ದಾರ್ ಅವರಂತೂ ಈ ಕಡೆ ತಿರುಗಿ ನೋಡಿಲ್ಲ, ಪಿಡಿಒ ಅವರನ್ನ ಕೇಳಿದ್ರೆ ನನಗೆ ಆರಾಮಿಲ್ಲ. ನಿಮಗೆಲ್ಲಿಂದ ದಿನಸಿ ವಸ್ತುಗಳನ್ನ ತಂದುಕೊಡಲಿ ಅಂತಿದ್ದಾರೆ ಅಂತಾ ಗ್ರಾಮದ ಜನರು ಆರೋಪಿಸಿದ್ದಾರೆ.
ಸೀಲ್‌ಡೌನ್ ಮಾಡಿ 8 ದಿನ ಕಳೆದ್ರೂ ಜಿಲ್ಲಾಡಳಿತ ಯಾವುದೇ ಸೌಕರ್ಯ ಮಾಡಿಲ್ಲ. ಊಟಕ್ಕೂ ಇಲ್ಲ, ಕುಡಿಯೋಕು ನೀರು ಸಹ ಬಿಟ್ಟಿಲ್ಲ. ಇನ್ನೇನ್ ಮಾಡೋದು, ಆಹಾರ ಪದಾರ್ಥಗಳನ್ನಾದ್ರೂ ಕೊಟ್ಟು ಪುಣ್ಯ ಕಟ್ಗೊಳ್ಳಿ, ಇಲ್ಲ ನಮಗೆ ಕೆಲಸಕ್ಕೆ ಹೋಗೋದಕ್ಕಾದರೂ ಬಿಡಿ ಅಂತಾ ಗ್ರಾಮಸ್ಥರು ಗೋಳಾಡುತ್ತಿದ್ದಾರೆ.