ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ - ಧಾರವಾಡ, ಗದಗ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಸಂಭ್ರಮ

ಹುಬ್ಬಳ್ಳಿ-ಧಾರವಾಡ, ಗದಗ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಆಯುಧ ಪೂಜೆ ಮಾಡಿದರು.

ಠಾಣೆಗಳಲ್ಲಿ ಆಯುಧ ಪೂಜೆ ಸಂಭ್ರಮ

By

Published : Oct 7, 2019, 5:47 PM IST

ಧಾರವಾಡ/ಹುಬ್ಬಳ್ಳಿ/ಗದಗ : ಧಾರವಾಡದ ಸಶಸ್ತ್ರ ಮೀಸಲು ಪಡೆಯಿಂದ ಆಯುಧ ‌ಪೂಜೆ ನೆರವೇರಿಸಲಾಯಿತು. ಸಶಸ್ತ್ರ ‌ಮೀಸಲು ಪಡೆ ಕಚೇರಿಯಲ್ಲಿ ಪೊಲೀಸ್ ಸಿಬ್ಬಂದಿ ಆಯುಧ ಪೂಜೆ ನೆರವೇರಿಸಿದರು.

ವಾಹನಗಳು, ರಿವಾಲ್ವಾರ್​, ಬಂದೂಕು, ಸೇರಿದಂತೆ ಸಶಸ್ತ್ರ ‌ಮೀಸಲು ಪಡೆ ಆಯುಧಗಳನ್ನು ಅಲಂಕಾರಗೊಳಿಸಿ ಪೂಜೆ ಮಾಡಿದರು. ಪೊಲೀಸ್ ಸಿಬ್ಬಂದಿ ಬಿಳಿ ಪಂಚೆ ಮತ್ತು ಬಿಳಿ‌ ಶರ್ಟ್ ಧರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಸಂಭ್ರಮ

ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಆಯುಧ ಪೂಜೆ ಸಂಭ್ರಮ :ದಸರಾ ಹಬ್ಬದ ಪ್ರಯುಕ್ತ ನಗರದ ಉಪನಗರ ಠಾಣೆಯಲ್ಲಿರುವ ರೈಫಲ್ ಗನ್, ಸರಪಣಿ, ಬೇಡಿ , ಲಾಠಿ ಹೀಗೆ ಅನೇಕ ಆಯುಧಗಳಿಗೆ ಪೂಜೆ ಮಾಡಲಾಯಿತು. ಪೂಜೆಯಲ್ಲಿ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

ಗದಗ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ಆಯುಧ ಪೂಜೆ :ಆಯುಧ ಪೂಜೆ ನಿಮಿತ್ತ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ಪೂಜೆ ಆಯುಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೊರವಲಯದಲ್ಲಿರುವ ಮಲ್ಲಸಮುದ್ರ ಬಳಿಯ ಕಚೇರಿಯಲ್ಲಿ, ಪೊಲೀಸ್ ಸಿಬ್ಬಂದಿ ತಮಗೆ ನೀಡಿರುವ ವಿವಿಧ ಬಂದೂಕುಗಳು ಸೇರಿದಂತೆ ಕಚೇರಿಗೆ ಪೂಜೆ ಸಲ್ಲಿಸಿದರು. ಈ ಪೂಜಾ ಕಾರ್ಯಕ್ರಮದಲ್ಲಿ ಎಸ್ಪಿ ಶ್ರೀನಾಥ್ ಜೋಶಿ, ಡಿವೈಎಸ್ಪಿ ವಿಜಯ್ ಕುಮಾರ್ ಸೇರಿದಂತೆ ಗದಗ, ಬೆಟಗೇರಿ ಅವಳಿ ನಗರದಲ್ಲಿರುವ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ABOUT THE AUTHOR

...view details