ಗದಗ: ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗಾಲಾಗಿರೋ ನಗರದ ಜನರು ಇನ್ಮುಂದೆ ಆಟೋಗಳಲ್ಲಿ ಪ್ರಯಾಣಿಸುವುದು ಕಷ್ಟಕರವಾಗಲಿದೆ. ಗದಗದಲ್ಲಿ ನಿನ್ನೆ ಆಟೋ ಚಾಲಕರು ಮತ್ತು ಮಾಲೀಕರು ಬೆಲೆ ಹೆಚ್ಚಳ ಮಾಡುವ ಕುರಿತು ಸಭೆ ಮಾಡಿದ್ದು, ಆಟೋಗಳಲ್ಲಿ ಪ್ರಯಾಣ ಬಲು ತುಟ್ಟಿಯಾಗಲಿದೆ.
ಪ್ರಯಾಣಿಕರಿಗೆ ಮತ್ತೊಂದು ಶಾಕ್: ಬೆಲೆ ಏರಿಕೆ ಮಧ್ಯೆ ಆಟೋ ದರ ಹೆಚ್ಚಳ
ಗದಗದಲ್ಲಿ ನಿನ್ನೆ ಆಟೋ ಚಾಲಕರು ಹಾಗು ಮಾಲೀಕರು ಬೆಲೆ ಹೆಚ್ಚಳ ಮಾಡುವ ಕುರಿತು ಸಭೆ ಮಾಡಿದ್ದು, ಇನ್ಮುಂದೆ ಆಟೋಗಳಲ್ಲಿ ಪ್ರಯಾಣ ಬಲು ತುಟ್ಟಿಯಾಗಲಿದೆ.
ಗದಗದಲ್ಲಿ ಆಟೋ ದರ ಹೆಚ್ಚಳ
ಈಗಾಗಾಲೇ ಬಸ್ ದರ ಹಾಗೂ ಆಟೋ ರೇಟ್ ಏರಿಕೆಯಿಂದ ಜನರು ಬಳಲಿದ್ದರು. ಈ ಬೆನ್ನಲ್ಲೇ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಸೇರಿದ್ದ ನೂರಾರು ಆಟೋ ಮಾಲೀಕರು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಮ್ಮ ದಿನ ನಿತ್ಯದ ಜೀವನ ನಡೆಸೋದು ಕಷ್ಟವಾಗಿದೆ. ಹೀಗಾಗಿ, ಬೆಲೆ ಏರಿಕೆಯನ್ನ ಪರಿಷ್ಕರಣೆ ಮಾಡೋಣ ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ. ಇದರಿಂದ ಮತ್ತೆ ನಗರದ ಜನರು ಆಟೋಗೆ ದುಬಾರಿ ಬೆಲೆ ತೆರಬೇಕಾಗಿದೆ.
ಇದನ್ನೂ ಓದಿ:ತುಮಕೂರಿನಲ್ಲಿ ಕಾರು - ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ: ಇಬ್ಬರ ಸಾವು!