ಕರ್ನಾಟಕ

karnataka

ETV Bharat / state

ಚಾಲಕರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್​ ದೋಚಿ ಪರಾರಿಯಾದ ದುಷ್ಕರ್ಮಿಗಳು - Gadag latest crime news

ಲಾರಿ ಚಾಲಕರನ್ನೇ ಟಾರ್ಗೆಟ್​ ಮಾಡಿಕೊಂಡಿರಿವ ದುಷ್ಕರ್ಮಿಗಳ ಗುಂಪೊಂದು ಚಾಲಕರ ಮೇಲೆ ಹಲ್ಲೆ ನಡೆಸಿ ಅವರಿಂದ ಹಣ, ಮೊಬೈಲ್​ ದೋಚಿ ಪರಾರಿಯಾಗಿದ್ದಾರೆ.

Attack on lorry drivers in Gadag
ಗಾಯಗೊಂಡ ಲಾರಿ ಚಾಲಕ

By

Published : Dec 25, 2020, 11:56 PM IST

ಗದಗ: ಮೂವರು ದುಷ್ಕರ್ಮಿಗಳು ಸೇರಿ ಒಂದೇ ಬೈಕ್​​ನಲ್ಲಿ ಬಂದು ಲಾರಿ ಚಾಲಕರ ಮೇಲೆ ದಾಳಿ‌ ಮಾಡಿ ಹಲ್ಲೆ ನಡೆಸಿ, ಹಣ ವಸೂಲಿ ಮಾಡಿರುವ ಪ್ರತ್ಯೇಕ ಘಟನೆ ಗದಗನಲ್ಲಿ ನಡೆದಿದೆ.

ಗದಗ ತಾಲೂಕಿನ ಹುಲಕೋಟಿ, ಸಂಭಾಪುರ ಕ್ರಾಸ್ ಮತ್ತು ಲಕ್ಕುಂಡಿ ಗ್ರಾಮಗಳ ಬಳಿ ಈ ಘಟನೆಗಳು ನಡೆದಿವೆ. ಒಂದೇ ಬೈಕ್​​ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮೂರು ಕಡೆಗಳಲ್ಲಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ : ಬಾರದ ವೃದ್ಧಾಪ್ಯ ವೇತನ: ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ ವೃದ್ಧ

ಹುಬ್ಬಳ್ಳಿ ಮಾರ್ಗದಲ್ಲಿ ಹುಲಕೋಟಿ ಗ್ರಾಮದ ಬಳಿ ಲಾರಿಯನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದ ವಿಜಯಕುಮಾರ್ ಎಂಬ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಲಕ ವಿಜಯಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ. ಸಂಭಾಪುರ ಕ್ರಾಸ್ ಬಳಿಯೂ ಲಾರಿಯ ಗಾಜು ಒಡೆದ ದುಷ್ಕರ್ಮಿಗಳು ಚಾಲಕ ಜೀವನಸಾಬ್ ಎಂಬುವವರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ಕಿತ್ತುಕೊಂಡಿದ್ದಾರೆ.

ಇದೇ ಗ್ಯಾಂಗ್ ಲಕ್ಕುಂಡಿಯ ಬಸ್ ನಿಲ್ದಾಣದ ಹತ್ತಿರವೂ ಮತ್ತೊಬ್ಬ ಲಾರಿ ಚಾಲಕನ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ ಚಾಲಕ ಕಿರುಚಿಕೊಂಡಿದ್ದರಿಂದ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ. ಗಾಯಗೊಂಡಿರುವ ಚಾಲಕರಾದ ವಿಜಯಕುಮಾರ್ ಹಾಗೂ ಜೀವನಸಾಬ್ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details