ಗದಗ :ಮಾಹಿತಿ ಹಕ್ಕಿನಡಿ ಗ್ರಾಮ ಪಂಚಾಯತ್ ಅವ್ಯವಹಾರ ಕುರಿತು ಮಾಹಿತಿ ಕೇಳಿದ್ದಕ್ಕೆ ಗ್ರಾ.ಪಂ ಸದಸ್ಯ ಮತ್ತು ಆತನ ಕುಟುಂಬಸ್ಥರು ಸೇರಿ ಯುವಕನೋರ್ವನ ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಪಟ್ಟಣದಲ್ಲಿ ನಡೆದಿದೆ.
ಅವ್ಯವಹಾರ ಕುರಿತು ಮಾಹಿತಿ ಕೇಳಿದ್ದಕ್ಕೆ ಯುವಕನಿಗೆ ಥಳಿತ - Gadag latest news
ಗ್ರಾಪಂ ಸದಸ್ಯ ಶಿವನಗೌಡ ಹಾಗೂ ಆತನ ಕುಟುಂಬ ಸದಸ್ಯರು ಸೇರಿ ಪಂಚಾಯತ್‌ಗೆ ಕರೆಸಿ ಮನಬಂದಂತೆ ಥಳಿಸಿದ್ದಾರೆ ಎಂದು ಥಳಿತಕ್ಕೊಳಗಾದ ಯುವಕ ಮಹಾಂತೇಶ್ ಆರೋಪಿಸಿದ್ದಾರೆ.
ಥಳಿತಕ್ಕೊಳಗಾದ ಯುವಕ ಮಹಾಂತೇಶ
ಗ್ರಾ.ಪಂ ಸದಸ್ಯ ಶಿವನಗೌಡ ಹಾಗೂ ಆತನ ಕುಟುಂಬ ಸದಸ್ಯರು ಸೇರಿ ಪಂಚಾಯತ್‌ಗೆ ಕರೆಸಿ ಮನಬಂದಂತೆ ಥಳಿಸಿದ್ದಾರೆ ಎಂದು ಥಳಿತಕ್ಕೊಳಗಾದ ಯುವಕ ಮಹಾಂತೇಶ್ ಆರೋಪಿಸಿದ್ದಾರೆ. ಯುವಕನನ್ನು ಇದೀಗ ಗದಗ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ.
ಗ್ರಾಮ ಪಂಚಾಯತ್‌ನಲ್ಲಿ ನಡೆದ ಅವ್ಯವಹಾರ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದ್ದಕ್ಕೆ ಈ ರೀತಿ ಹಲ್ಲೆ ಮಾಡಿದ್ದಾರೆಂದು ಗಾಯಾಳು ಯುವಕ ಆರೋಪಿಸಿದ್ದಾರೆ. ಘಟನೆ ಸಂಬಂಧ ಶಿರಹಟ್ಟಿ ಪೊಲೀಸರು ಯುವಕನಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
Last Updated : Sep 1, 2020, 10:51 PM IST