ಗದಗ :ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಕೊರೊನಾ ಲಾಕ್ಡೌನ್ ಆದೇಶ ಜಾರಿಯಾಗಿದೆ. ಇದರ ನಡುವೆಯೂ ಬೀದಿಗೆ ಬಂದ ಯುವಕರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸುತ್ತಿದ್ದಾರೆ.
ರೋಣ ತಾಲೂಕಿನ ಮಾರನಬಸರಿ ಗ್ರಾಮದ ಆಶಾ ಕಾರ್ಯಕರ್ತೆಯರು ಈ ಕಾರ್ಯ ಮಾಡುತ್ತಿದ್ದಾರೆ. ಕೈಯಲ್ಲಿ ಲಾಠಿ ಹಿಡಿದು ಗ್ರಾಮದಲ್ಲಿ ಮಾಸ್ಕ್ ಧರಿಸದೆ ಬೇಕಾ ಬಿಟ್ಟಿಯಾಗಿ ಓಡಾಡುತ್ತಿರುವ ಬೈಕ್ ಸವಾರರಿಗೆ ಪಾಠ ಕಲ್ಲಿಸುತ್ತಿದ್ದಾರೆ.
ಗ್ರಾಮದ ರಕ್ಷಣೆಗೆ ನಿಂತ ಆಶಾ ಕಾರ್ಯಕರ್ತೆಯರು.. ಮಹಾಮಾರಿ ಕೊರೊನಾ ವೈರಸ್ಗೆ ಈಗಾಗಲೇ ಗದಗ ಜಿಲ್ಲೆಗೆ ಲಗ್ಗೆ ಇಟ್ಟು 80 ವರ್ಷದ ವೃದ್ಧೆಯನ್ನು ಬಲಿ ಪೆಡೆದಿದೆ. ಹಾಗಾಗಿ ಆಶಾ ಕಾರ್ಯಕರ್ತೆಯರು ಸಹ ಗ್ರಾಮದ ಜನರ ರಕ್ಷೆಣೆಗೋಸ್ಕರ ತಾವೇ ಕೈಯಲ್ಲಿ ಲಾಠಿ ಹಿಡಿದು ಮಾಸ್ಕ್ ಇಲ್ಲದೇ ಸಂಚರಿಸುವವರಿಗೆ ನೀತಿ ಪಾಠ ಸಹ ಹೇಳುತ್ತಿದ್ದಾರೆ. ಮಾಸ್ಕ್ ಇಲ್ಲದ ಯುವಕರಿಗೆ ತಮ್ಮ ಅಂಗಿಯನ್ನೇ ಕಟ್ಟಿಕೊಂಡ ಹೋಗುವಂತೆ ತಿಳಿ ಹೇಳಿದ್ದಾರೆ.
ಗ್ರಾಮಕ್ಕೆ ತಾವೇ ಪೊಲೀಸ್ ಸಿಬ್ಬಂದಿಯಂತೆ ಆಶಾ ಕಾರ್ಯಕರ್ತೆಯರು ಜನರ ರಕ್ಷಣೆಗೆ ನಿಂತಿರುವುದು ಮಾತ್ರ ಶ್ಲಾಘನೀಯ.