ಗದಗ:ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 5 ಮಂದಿಯನ್ನು ಶಹರ ಪೊಲೀಸರು ಬಂಧಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಐವರ ಬಂಧನ - ಗದಗ ಕ್ರಿಕೆಟ್ ಬೆಟ್ಟಿಂಗ್
ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 5 ಮಂದಿಯನ್ನು ಶಹರ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 1 ಲಕ್ಷದ 55 ಸಾವಿರ ನಗದು, 6 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಐವರ ಬಂಧನ
ಶ್ರೀನಿವಾಸ್, ಅಲ್ತಾಫ್, ಸಾಗರ, ವಿನಾಯಕ, ಪ್ರಕಾಶ್ ಬಂಧಿತ ಆರೋಪಿಗಳು. ನಗರದ ಕಳಸಾಪೂರ ರಸ್ತೆಯ ರಿಂಗ್ ರೋಡ್ ಬಳಿಯ ಬಾಲಾಜಿ ನಗರದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಪಂದ್ಯದ ವಿಚಾರವಾಗಿ ಬೆಟ್ಟಿಂಗ್ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆ ದಾಳಿ ಮಾಡಿದ ಸಿಪಿಐ ಪಿ.ವಿ.ಸಾಲಿಮಠ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 1 ಲಕ್ಷದ 55 ಸಾವಿರ ನಗದು, 6 ಮೊಬೈಲ್ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ.