ಕರ್ನಾಟಕ

karnataka

ETV Bharat / state

ಜಿಮ್ಸ್ ಆಸ್ಪತ್ರೆಯಲ್ಲಿ ಕಟ್ಟಿರುವೆಗಳ ಕಾಟ: ಪುಟ್ಟ ಕಂದಮ್ಮಗಳ ನರಳಾಟ - undefined

ಜಿಲ್ಲೆಯ ಜಿಮ್ಸ್ ಆಸ್ಪತ್ರೆಯ ಸ್ಥಿತಿ ದೇವರಿಗೆ ಪ್ರೀತಿ. ಬಾಣಂತಿ ಮತ್ತು ಹಸುಗೂಸುಗಳ ಮೇಲೆ ಕಟ್ಟಿರುವೆಗಳು ದಾಳಿ ಮಾಡುತ್ತಿದ್ದು, ಹಸುಗೂಸುಗಳು ನರಳಾಡುತ್ತಿವೆ.

gadag

By

Published : Jul 1, 2019, 10:29 AM IST

ಗದಗ :ಜಿಮ್ಸ್ ಆಸ್ಪತ್ರೆಯಲ್ಲಿ ಕಟ್ಟಿರುವೆಗಳ ಹಾವಳಿ ಹೆಚ್ಚಾಗಿದ್ದು, ಬಾಣಂತಿಯರು ಮತ್ತು ಹಸುಗೂಸುಗಳ ಇಡೀ ರಾತ್ರಿ ನಿದ್ರೆಯಿಲ್ಲದೆ ಹೈರಾಣಾಗುತ್ತಿದ್ದಾರೆ.

ಜಿಮ್ಸ್ ಆಸ್ಪತ್ರೆಯ ಅನೇಕ ವಾರ್ಡ್​ಗಳಲ್ಲಿ ಕಳೆದ ಕೆಲವು ದಿನಗಳಿಂದ ಕಟ್ಟಿರುವೆಗಳ ಹಾವಳಿ ಹೆಚ್ಚಾಗಿದ್ದು, ಇರುವೆಗಳ ಕಾಟದಿಂದ ಪುಟ್ಟ ಕಂದಮ್ಮಗಳು ಹಗಲಿರುಳು ನರಳಾಡುತ್ತಿವೆ. ಹಸುಗೂಸುಗಳ ನರಳಾಟವನ್ನು ತಡೆಯಲು ಸಾಧ್ಯವಾಗದೇ ಬಾಣಂತಿಯರು ಪರದಾಡುತ್ತಿದ್ದಾರೆ. ಈ ಕುರಿತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಕೇಳಿದರೆ ಏನು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ.

ಇರುವೆ ಕಾಟದಿಂದ ನರಳಾಡುತ್ತಿರುವ ಕಂದಮ್ಮಗಳು

ಈ ಕುರಿತು ಮಾಧ್ಯಮಗಳೊಂದಿಗೆ ಜೀಮ್ಸ್​ ಆತ್ರೆಯ ನಿರ್ದೇಶಕ ಎಸ್. ಭೂಸರೆಡ್ಡಿ ನಗರದಲ್ಲಿ ಮಳೆಯಾಗಿದ್ದರಿಂದ ಇರುವೆಗಳ ಸಮಸ್ಯೆ ಹೆಚ್ಚಾಗಿದೆ. ಈ ಕುರಿತು ರೋಗಿಗಳ ಕುಟುಂಬದವರು ನರ್ಸ್​ಗಳಿಗೆ ತಿಳಿಸಿದ್ದು, ಅವರು ಬೇಜಾವ್ದಾರಿಯಿಂದ ವರ್ತಿಸಿದ್ದಾರೆ. ಈಗಾಗಲೇ ಅಂತಹವರ ಮೇಲೆ ಸೂಕ್ತ ಕೈಗೊಳ್ಳುತ್ತಿದ್ದೇವೆ. ಆದರೆ ವಿಷಯ ತಿಳಿಯುತ್ತಿದ್ದಂತೆ ನಮ್ಮ ಸಿಬ್ಬಂದಿ ಅಲ್ಲಿಗೆ ತೆರಳಿ ನಿಯಂತ್ರಿಸುವ ಕ್ರಮ ಕೈಗೊಂಡಿದ್ದಾರೆ. ರೋಗಿಗಳಿಗೆ ತೊಂದರೆಯಾಗುವಂತಹ ಯಾವುದೇ ಸ್ಥಿತಿ ನಿರ್ಮಾಣ ಆಗಿಲ್ಲ. ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದರು.

For All Latest Updates

TAGGED:

ABOUT THE AUTHOR

...view details