ಕರ್ನಾಟಕ

karnataka

ETV Bharat / state

ಗದಗದಲ್ಲಿ ನಾಲ್ಕಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ: ಮೂಲ ಮಾತ್ರ ನಿಗೂಢ..!

ಕೊವಿಡ್ 19 ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ (ಪಿ-166) 80 ವರ್ಷದ ವೃದ್ಧೆ ಮೃತಪಟ್ಟ ಬಳಿಕ ಇದೀಗ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.

Another positive case detected in Gadag district
ಜಿಲ್ಲಾಧಿಕಾರಿ ಎಂ‌.ಜಿ. ಹಿರೇಮಠ (ಸಂಗ್ರಹ ಚಿತ್ರ)

By

Published : Apr 20, 2020, 7:03 PM IST

ಗದಗ:ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ‌. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿದೆ.

ನಗರದ ರಂಗನವಾಡ ಗಲ್ಲಿಯಲ್ಲಿ (ರೋಗಿಯ ಸಂಖ್ಯೆ P-396) 24 ವರ್ಷದ ಯುವಕನೋರ್ವನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು (ರೋಗಿಯ ಸಂಖ್ಯೆ P-370) ದ್ವಿತೀಯ ವ್ಯಕ್ತಿಯ ಸಂಪರ್ಕದಿಂದ ಸೋಂಕು ತಗುಲಿರಬಹುದೆಂದು ಜಿಲ್ಲಾಧಿಕಾರಿ ಎಂ‌.ಜಿ. ಹಿರೇಮಠ ಶಂಕಿಸಿದ್ದಾರೆ.

ಈ ಹಿಂದೆ ರಂಗನವಾಡ ಗಲ್ಲಿಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 80 ವರ್ಷದ ವೃದ್ಧೆ ಸಾವನ್ನಪ್ಪಿದ್ದಳು. ಅದಾದ ಬಳಿಕ ಈಕೆಯ ಸಂಪರ್ಕದಲ್ಲಿದ್ದ ಅದೇ ಪ್ರದೇಶದ 59 ವರ್ಷದ ಇವಳ ಗೆಳತಿಗೆ ಪಾಸಿಟಿವ್ ಕಾಣಿಸಿಕೊಂಡಿತ್ತು. ಇದಾದ ಬಳಿಕ ಮತ್ತೆ 42 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.

ಜಿಲ್ಲಾ ಆಸ್ಪತ್ರೆ (ಸಂಗ್ರಹ ಚಿತ್ರ)

ಒಟ್ಟು ಮೂರು ಕೊರೊನಾ ಪೊಸಿಟಿವ್ ಕೇಸ್ ದೃಢವಾಗಿದ್ದವು. ಆದ್ರೆ, ಇಂದು ಸಂಜೆ ಹೊತ್ತಿಗೆ ಮತ್ತೊಂದು ಪಾಸಿಟಿವ್​​ ಕೇಸ್ ಪತ್ತೆಯಾಗಿದೆ. ಆದರೆ, ಈ ಪೈಕಿ ಯಾರೊಬ್ಬರೂ ಪ್ರಯಾಣ ಮಾಡಿರುವ ಟ್ರಾವೆಲ್‌ ಹಿಸ್ಟರಿ ಇಲ್ಲದ್ದರಿಂದ ಜಿಲ್ಲಾಡಳಿತಕ್ಕೂ ಇದು ತಲೆನೋವಾಗಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details