ಕರ್ನಾಟಕ

karnataka

ETV Bharat / state

ಗದಗ ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿ.. - corona positive in Gadag district

ಮಧುಮೇಹ ಹಾಗೂ ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದ 44 ವರ್ಷದ ಲಕ್ಕುಂಡಿ ಗ್ರಾಮದ ಆ ವ್ಯಕ್ತಿ ಗದಗ ಸಿಎಸ್‍ಐ ಆಸ್ಪತ್ರೆಗೆ ಮೇ 27ರಂದು ದಾಖಲಾಗಿದ್ದರು. ಜೂನ್‌ 1ರಂದು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Another corona positive in Gadag district
ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

By

Published : Jun 3, 2020, 6:52 PM IST

ಗದಗ :ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸೋಂಕಿತ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಖಚಿತಪಡಿಸಿದ್ದಾರೆ.

ಮಧುಮೇಹ ಹಾಗೂ ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದ 44 ವರ್ಷದ ಲಕ್ಕುಂಡಿ ಗ್ರಾಮದ ಆ ವ್ಯಕ್ತಿ ಗದಗ ಸಿಎಸ್‍ಐ ಆಸ್ಪತ್ರೆಗೆ ಮೇ 27ರಂದು ದಾಖಲಾಗಿದ್ದರು. ಜೂನ್‌ 1ರಂದು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆ ವ್ಯಕ್ತಿ ಇಂದು ಮೃತಪಟ್ಟಿದ್ದು, ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಮೃತರ ಅಂತ್ಯ ಸಂಸ್ಕಾರವು ಕೋವಿಡ್-19 ವಿಪತ್ತು ನಿರ್ವಹಣಾ ಮಾರ್ಗಸೂಚಿ ರೀತ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದ್ದಾರೆ.

ABOUT THE AUTHOR

...view details