ಗದಗ:ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಸೋಂಕಿತ ಕೇಸ್ ಪತ್ತೆಯಾಗಿದ್ದು, ಸದ್ಯ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಗದಗದಲ್ಲಿ ಮತ್ತೊಂದು ಕೊರೊನಾ ಕೇಸ್... ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ - ಗದಗ ಕೊರೊನಾ ನ್ಯೂಸ್
ರೋಗಿ ಸಂಖ್ಯೆ 304ರ ಜೊತೆಗೆ ಸಂಪರ್ಕದಲ್ಲಿದ್ದ 42 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಸದ್ಯ ಗದಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ರಂಗನವಾಡ ಗಲ್ಲಿಯಲ್ಲಿ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ರೋಗಿ ಸಂಖ್ಯೆ 370, ಅಂದರೆ 42 ವರ್ಷದ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆಯೆಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಈ ಹಿಂದೆ ರಂಗನವಾಡ ಗಲ್ಲಿಯಲ್ಲಿನ 80 ವರ್ಷದ ವೃದ್ಧೆ, ರೋಗಿ ಸಂಖ್ಯೆ-166ಗೆ ಸೋಂಕು ತಗುಲಿ ಸಾವನ್ನಪ್ಪಿದ್ದರು. ಅದಾದ ಬಳಿಕ ರೋಗಿ-304, 59 ವರ್ಷದ ಮಹಿಳೆಗೆ ಸೋಂಕು ತಗುಲಿತ್ತು. ಅವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗ ಅದೇ ರಂಗನವಾಡ ಗಲ್ಲಿಯಲ್ಲಿನ ರೋಗಿ-304ರ ಜೊತೆಗೆ ಸಂಪರ್ಕದಲ್ಲಿದ್ದ 42 ವರ್ಷದ ವ್ಯಕ್ತಿ(P-370)ಗೆ ಸೋಂಕು ತಗುಲಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.