ಗದಗ:ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿರೋ ಆಂಜನೇಯ ದೇವಸ್ಥಾನ ಕೊಚ್ಚಿ ಹೋಗಿದೆ. ಇಂದು ಶನಿವಾರವಾದ ಕಾರಣ ಭಕ್ತರು ಹೊಳೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲು ಹೋದಾಗ ನೀರಿನ ರಭಸಕ್ಕೆ ಆಂಜನೇಯನ ದೇವಸ್ಥಾನ ಕೊಚ್ಚಿ ಹೋಗಿರುವುದು ಗೊತ್ತಾಗಿದೆ.
ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಶಿರೋಳದ ಆಂಜನೇಯ ಸ್ವಾಮಿ ದೇವಸ್ಥಾನ - ಗಅದಅಗಅ
ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿರೋ ಆಂಜನೇಯ ದೇವಸ್ಥಾನ ಕೊಚ್ಚಿ ಹೋಗಿದೆ.
ಶಿರೋಳದ ಆಂಜನೇಯ ಸ್ವಾಮಿ ದೇವಸ್ಥಾನ
ನಿನ್ನೆಯಿಂದಲೂ ತುಂಬಿ ಹರಿಯುತ್ತಿದ್ದ ಮಲಾಪ್ರಭಾ ನದಿ ನೀರು ಶಿರೋಳ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಹಾಗಾಗಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ನಿನ್ನೆಯೇ ಅವಸರದಿಮದ ನಿಮಜ್ಜನ ಮಾಡಲಾಗಿತ್ತು.
ದೇವರಿಗೆ ಪ್ರವಾಹ ಕಾಡುತ್ತಿದೆ. ಇನ್ನು ಜನರಿಗೆ ಬಿಡುತ್ತಾ ಎಂದು ಜನರು ಪರಿಸ್ಥಿತಿ ನೆನೆದು ಪರಿತಪಿಸುತ್ತಿದ್ದಾರೆ.
Last Updated : Sep 10, 2019, 11:28 PM IST