ಕರ್ನಾಟಕ

karnataka

ETV Bharat / state

ಪಿಎಫ್​ಐ ಸಂಘಟನೆ ಜೊತೆ ಲಿಂಕ್​ ಹೊಂದಿರುವ ಆರೋಪ: ಇಬ್ಬರ ಬಂಧನ, ಓರ್ವ ವಶಕ್ಕೆ - gadaga pfi leaders arrest news

ಗದಗದ ಶಜರ ಪೊಲೀಸರು ಪಿಎಫ್​ಐ ಸಂಘಟನೆ ಜೊತೆ ಲಿಂಕ್​ನಲ್ಲಿದ್ದ ಇಬ್ಬರು ಯುವಕರನ್ನು ಬಂಧಿಸಿದ್ದು, ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಈ ಮೂವರು ಜಿಲ್ಲಾದ್ಯಂತ ಸಂಘಟನೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು ಎನ್ನಲಾಗ್ತಿದೆ.

ಪಿಎಫ್​ಐ ಸಂಘಟನೆ
ಪಿಎಫ್​ಐ ಸಂಘಟನೆ

By

Published : Sep 27, 2022, 4:01 PM IST

ಗದಗ: ಜಿಲ್ಲೆಯಲ್ಲಿ ಪಿಎಫ್ಐ ಸಂಘಟನೆ ಫುಲ್ ಆ್ಯಕ್ಟೀವ್ ಆಗಿದ್ದು, ಹುಬ್ಬಳ್ಳಿಯಿಂದ ಗದಗದಲ್ಲಿ ಪಿಎಫ್​ಐ ಸಂಘಟನೆ ಆಪರೇಟ್ ಆಗುತ್ತಿತ್ತು ಎನ್ನುವ ಮಾಹಿತಿ ಇದೀಗ ಹೊರಬಿದ್ದಿದೆ. ಈ ಸಂಘಟನೆ ಜೊತೆ ಲಿಂಕ್​ನಲ್ಲಿದ್ದ ಇಬ್ಬರು ಯುವಕರನ್ನು ಗದಗ ಶಹರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗದಗದ ರಹೆಮತ್ ನಗರದ ರುಸ್ತುಂ ಗೌಂಡಿ, ಕಾಗದಗಾರ ಓಣಿಯ ಸರ್ಫರಾಜ್ ದಂಡೀನ್​ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬೆಟಗೇರಿಯ ಸನಾ ಉಲ್ಲಾ ಶಲವಡಿ ಎಂಬುವವರನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸರ್ಫರಾಜ್ ಮೆಕ್ಯಾನಿಕ್ ಆಗಿದ್ದು, ರುಸ್ತುಂ ಪ್ಲಂಬರ್ ಕೆಲಸ ಮಾಡುತ್ತಿದ್ದ. ಜೊತೆಗೆ ಸನಾಉಲ್ಲಾ ಜೆಸಿಬಿ ಕೆಲಸ ಮಾಡುತ್ತಿದ್ದ. ಈ ಮೂವರು ಪಿಎಫ್​ಐ ಸಂಘಟನೆ ಜೊತೆ ಗುರುತಿಸಿಕೊಂಡಿದ್ದು, ಜಿಲ್ಲಾದ್ಯಂತ ಸಂಘಟನೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು ಎನ್ನಲಾಗ್ತಿದೆ.

ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿ: ಸೆಪ್ಟೆಂಬರ್ 22 ರಂದು ರಾಷ್ಟ್ರಿಯ ತನಿಖಾದಳ ದೇಶಾದ್ಯಂತ ಪಿಎಫ್​ಐ ಸಂಘಟನೆ ಕಾರ್ಯಕರ್ತರ ಮನೆ, ಕಚೇರಿ ಮೇಲೆ ದಾಳಿ ನಡೆಸಿತ್ತು. ಈ ದಾಳಿ ಖಂಡಿಸಿ ಹುಬ್ಬಳ್ಳಿ ಕೌಲ್ ಬಜಾರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ವಿವಿಧೆಡೆ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಗದಗದಿಂದ ಜನರನ್ನ ಕರೆದುಕೊಂಡು ಬರಲೆಂದು, ಜನರನ್ನ ಸಂಪರ್ಕಿಸುವ ಕೆಲಸವನ್ನ ಈ ಮೂವರು ಆರೋಪಿಗಳು ಮಾಡಿದ್ರು.

ನಮ್ಮ ಮಗ ಆ ಸಂಘಟನೆ ಜೊತೆ ಇಲ್ಲ:ಈ ಬಗ್ಗೆ ಮಾತನಾಡಿದ ಸರ್ಫರಾಜ್ ತಂದೆ ಅಬ್ದುಲ್ ವಹಾಬ್, ಬೆಳಗ್ಗೆ 7 ಗಂಟೆ ಸುಮಾರಿಗೆ ಕ್ರಿಕೆಟ್ ಆಡುವುದಕ್ಕೆ ಹೊರಗಡೆ ಹೋಗಿದ್ದ ಎಂದುಕೊಂಡಿದ್ದೆವು. ಆದರೆ ಮಾಧ್ಯಮದವರಿಂದಲೇ ಆತ ಅರೆಸ್ಟ್ ಆಗಿರುವ ಬಗ್ಗೆ ನಮಗೆ ತಿಳಿದಿದೆ. ನಮ್ಮ ಮಗ ಪಿಎಫ್​ಐ ಸಂಘಟನೆ ಜೊತೆ ಲಿಂಕ್​ನಲ್ಲಿಲ್ಲ. ಸಮಾಜಘಾತುಕ ಕೆಲಸದಲ್ಲಿ ನಮ್ಮ ಮಕ್ಕಳು ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪಿಎಫ್​ಐ ಮುಖಂಡರ ಮನೆಯ ಮೇಲೆ ಎಸ್​ಪಿ ನೇತೃತ್ವದಲ್ಲಿ ದಾಳಿ: ಇಬ್ಬರು ವಶಕ್ಕೆ

ಯುವಕರ ಮೇಲೆ ಪೊಲೀಸ್ ಹದ್ದಿನ ಕಣ್ಣು: ಹುಬ್ಬಳ್ಳಿಯಿಂದ ಆಪರೇಟ್ ಆಗ್ತಿರುವ ಸಂಘಟನೆಯನ್ನ ಗದಗದಲ್ಲಿ ಬಲಗೊಳಿಸಲು 25ಕ್ಕೂ ಹೆಚ್ಚು ಯುವಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಅದರಲ್ಲಿ ಪ್ರಮುಖವಾಗಿ ಮೂವರನ್ನ ವಶಕ್ಕೆ ಪಡೆದು, ತನಿಖೆ ನಡೆಸಲಾಗ್ತಿದೆ. ಎರಡು ವರ್ಷದ ಹಿಂದೆ ಸಿಎಎ, ಎನ್​ಆರ್​ಸಿ ವಿರೋಧಿಸಿ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಗದಗ ಮೂಲದ ಹುಡುಗರನ್ನು ಕರೆದುಕೊಂಡು ಬರಲಾಗಿತ್ತು. ಗದಗ, ನರಗುಂದಲ್ಲಿ ಆ್ಯಕ್ಟೀವ್ ಆಗಿರುವ ಸಂಘಟನೆಯ ಯುವಕರ ವಿಚಾರಣೆ ನಡೆಯುತ್ತಿದೆ.

ಇಬ್ಬರು ನ್ಯಾಯಾಂಗ ಬಂಧನಕ್ಕೆ: ಸರ್ಫರಾಜ್, ರುಸ್ತುನನ್ನ ಏಳು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ನೀಡುವಂತೆ ತಾಲೂಕು‌ ದಂಡಾಧಿಕಾರಿ ಕಿಶನ್ ಕಲಾಲ್ ಆದೇಶ ಹೊರಡಿಸಿದ್ದಾರೆ. ಸನಾಉಲ್ಲಾ ಎಂಬಾತನ ವಿಚಾರಣೆ ಮುಂದುವರೆದಿದೆ.

ABOUT THE AUTHOR

...view details