ಗದಗ:ಸರ್ಕಾರಿ ಕಚೇರಿಯಲ್ಲಿಯೇ ಸಿಬ್ಬಂದಿ ಎಣ್ಣೆ ಪಾರ್ಟಿ ನಡೆಸಿದ ಘಟನೆ ನಗರದ ಎಪಿಎಂಸಿ ಯಾರ್ಡ್ನಲ್ಲಿರುವ ಓರಿಯೆಂಟಲ್ ಇನ್ಶುರೆನ್ಸ್ ಕಂಪನಿಯಲ್ಲಿ ನಡೆದಿದೆ.
ಸರ್ಕಾರಿ ಕಚೇರಿಯಲ್ಲಿ ಗುಂಡು ಪಾರ್ಟಿ: ಇವರನ್ನ ಹೇಳೋರು ಕೇಳೋರು ಯಾರೂ ಇಲ್ಲ...! - Alcohol in oriental Insurance compny Gadag
ಸರ್ಕಾರಿ ಕಚೇರಿಯಲ್ಲಿಯೇ ಸಿಬ್ಬಂದಿ ಎಣ್ಣೆ ಪಾರ್ಟಿ ನಡೆಸಿದ ಘಟನೆ ನಗರದ ಎಪಿಎಂಸಿ ಯಾರ್ಡ್ನಲ್ಲಿರುವ ಓರಿಯೆಂಟಲ್ ಇನ್ಶುರೆನ್ಸ್ ಕಂಪನಿಯಲ್ಲಿ ನಡೆದಿದೆ.

ಸರ್ಕಾರಿ ಕಚೇರಿಯಲ್ಲಿ ಗುಂಡು ಪಾರ್ಟಿ
ಸರ್ಕಾರಿ ಕಚೇರಿಯಲ್ಲಿ ಗುಂಡು ಪಾರ್ಟಿ
ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ಸಂಸ್ಥೆ ಇದಾಗಿದ್ದು, ರಾತ್ರಿ 11 ಗಂಟೆಯ ಸುಮಾರಿಗೆ ಕಂಪೆನಿಯ ಸಿಬ್ಬಂದಿ ಅಶೋಕ್ ಹಾಗೂ ವಿಶ್ವನಾಥ್ ಎಣ್ಣೆ ಪಾರ್ಟಿ ಆಯೋಜಿಸಿದ್ದರು ಎನ್ನಲಾಗುತ್ತಿದೆ.
ಪಾರ್ಟಿ ನಡೆಯುತ್ತಿದ್ದ ಮಾಹಿತಿ ಪಡೆದ ನಗರದ ಬಡಾವಣೆ ಠಾಣೆ ಪೋಲಿಸರು ದಾಳಿ ನಡೆಸಿದ್ದು, ಈ ವೇಳೆ ಸಿಬ್ಬಂದಿ ತಮ್ಮ ಕೃತ್ಯ ಮರೆಮಾಚಲು ಯತ್ನಿಸಿದ ಪ್ರಸಂಗವೂ ನಡೆಯಿತು. ಇನ್ನು ಮಾಧ್ಯಮದವರ ಕ್ಯಾಮೆರಾ ಕಂಡ ತಕ್ಷಣ ಎಲ್ಲರೂ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.