ಗದಗ: ಎಣ್ಣೆ ಸಿಗಲಿಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ತೀವಿ ಅಂದಿದ್ದಾಯ್ತು. ಕೆಲವರಂತೂ ಏನಾದರು ಮಾಡಿ ಮೊದಲು ಎಣ್ಣೆ ತೆರೆದುಬಿಡಿ ಅಂತಿದ್ದಾರೆ. ಮದ್ಯದಂಗಡಿ ತೆರೆಯಿರಿ ಅಂತಾ ಅವರೆಲ್ಲಾ ಶಾಸಕರು, ಸಚಿವರಿಗೆ ಫೋನ್ ಮಾಡಿ ಮಾಡಿ ಕಾಟ ಕೊಡುತ್ತಿದ್ದಾರೆ. ಆದ್ರೆ, ಏಪ್ರಿಲ್ 1ರಂದು ಮದ್ಯದ ಅಂಗಡಿಗಳು ತೆರೆಯುತ್ತವೆ ಅಂತಾ ಸುಳ್ಳು ಸುದ್ದಿ ನಂಬಿ ಕಾದು ಕುಳಿತ ಜನರಿಗೆ ಆಘಾತ ಕಾದಿತ್ತು.
ಏನಾದ್ರು ಮಾಡಿ ಮೊದಲು ಎಣ್ಣೆ ಅಂಗಡಿ ಓಪನ್ ಮಾಡಿ ಎನ್ನುತ್ತಿದ್ದ ಎಣ್ಣೆಪ್ರಿಯರಿಗೆ ಇಲ್ಲೊಂದೆಡೆ ಶಾಕ್ - ಗದಗದಲ್ಲಿ ಎಣ್ಣೆ ಮಾರಾಟ ವದಂತಿ
ಗದಗ ನಗರದಲ್ಲಿ ಇಂದು ಮದ್ಯ ಸಿಗಲಿದೆ ಎಂಬ ಸುದ್ದಿ ಹರಡಿದ್ದನ್ನೇ ಸತ್ಯ ಎಂದು ಭಾವಿಸಿದ ಮಂದಿ ಅದೇನು ಮಾಡಿದ್ರು ಗೊತ್ತೇ?
![ಏನಾದ್ರು ಮಾಡಿ ಮೊದಲು ಎಣ್ಣೆ ಅಂಗಡಿ ಓಪನ್ ಮಾಡಿ ಎನ್ನುತ್ತಿದ್ದ ಎಣ್ಣೆಪ್ರಿಯರಿಗೆ ಇಲ್ಲೊಂದೆಡೆ ಶಾಕ್ alcohol drunkers fooled in gadag](https://etvbharatimages.akamaized.net/etvbharat/prod-images/768-512-6616205-thumbnail-3x2-surya.jpg)
ಮದ್ಯ ಪ್ರಿಯರಿಗೆ ಶಾಕ್
ಮದ್ಯ ಪ್ರಿಯರಿಗೆ ಶಾಕ್!
ಮುಳಗುಂದ ರಸ್ತೆಯ ಎಂ.ಎಸ್.ಐ.ಎಲ್ ಬಳಿ ಎಣ್ಣೆ ಸಿಗುತ್ತೆ ಅಂತಾ ಮದ್ಯದ ಅಂಗಡಿ ಎದುರು ಜನ ಸಾಲುಗಟ್ಟಿ ನಿಂತಿದ್ದರು. ಆದ್ರಿಂದು ಏಪ್ರಿಲ್ 1. ಸುಳ್ಳು ಹೇಳಿ ಕೆಲವರು ಜನರನ್ನು ಮೂರ್ಖರನ್ನಾಗಿ ಮಾಡೋದು ಕಾಮನ್. ಮೊದಲೇ ಒಂದು ವಾರದಿಂದ ಎಣ್ಣೆ ಸಿಗದೇ ಕಂಗಾಲಾಗಿದ್ದ ಮದ್ಯವ್ಯಸನಿಗಳು ಅದನ್ನು ನಂಬಿ ಬೆಳ್ಳಂಬೆಳಗ್ಗೆ ಪೇಚಿಗೆ ಸಿಲುಕಿದ್ರು.
ಬಳಿಕ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗದಗ ಗ್ರಾಮೀಣ ಪೊಲೀಸರು ಮದ್ಯಪ್ರಿಯರನ್ನು ಸ್ಥಳದಿಂದ ಓಡಿಸಿದ್ರು.