ನರಗುಂದ( ಗದಗ): ನರಗುಂದದಲ್ಲಿ ಮತ್ತೆ ಭೂಕುಸಿತವಾಗಿದೆ. ನಿರಂತರ ಮಳೆಗೆ ಮೂರು ಮನೆಗಳು ಕುಸಿದು ಬಿದ್ದಿವೆ.
ನರಗುಂದದಲ್ಲಿ ಮತ್ತೆ ಭೂಕುಸಿತ...ಮೂರು ಮನೆಗಳು ನೆಲಸಮ, ತಪ್ಪಿದ ಭಾರಿ ಅನಾಹುತ! - ನರಗುಂದ ಭೂಕುಸಿತ ಸುದ್ದಿ,
ನರಗುಂದದಲ್ಲಿ ಮತ್ತೆ ಭೂಕುಸಿತವಾಗಿದ್ದು, ಕ್ಷಣ ಮಾತ್ರದಲ್ಲಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ನರಗುಂದದಲ್ಲಿ ಮತ್ತೆ ಭೂಕುಸಿತ
ಗದಗ ಜಿಲ್ಲೆಯ ನರಗುಂದ ಪಟ್ಟಣದ ಟಿಎಂಸಿ ರಸ್ತೆಯ ಬದಿಯಲ್ಲಿದ್ದ ಚನ್ನಬಸಪ್ಪ ಕತ್ತಿ, ಸಿದ್ಲಿಂಗಪ್ಪ ಕತ್ತಿ, ಹಾಗೂ ಸಿ.ಜಿ.ಹಸಬಿ ಎಂಬುವವರ ಮನೆಗಳು ನೆಲಸಮವಾಗಿವೆ. ನೋಡು ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮನೆಗಳು ಕುಸಿದು ಬಿದ್ದಿವೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಸ್ಥಳಕ್ಕೆ ನರಗುಂದ ಪುರಸಭೆ ಅಧಿಕಾರಿ, ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.