ಗದಗ:ಮಲಪ್ರಭಾ ನದಿ ಪ್ರವಾಹಕ್ಕೆ ಜಿಲ್ಲೆಯ ಹಲವು ಗ್ರಾಮಗಳು ಮುಳಗಡೆಯಾಗಿದ್ದು,ಈ ಹಿನ್ನೆಲೆಯಲ್ಲಿ ನಗರಕ್ಕೆ ಚಲನಚಿತ್ರ ನಟ ನೀನಾಸಂ ಸತೀಶ್ ಭೇಟಿ ನೀಡಿದರು.
ಜಿಲ್ಲೆಯ ಮುಳುಗಡೆ ಸ್ಥಳಗಳಿಗೆ ಭೇಟಿ ನೀಡಿದ ನಟ ನೀನಾಸಂ ಸತೀಶ್ - ವಿರೇಶ್ವರ ಪುಣ್ಯಾಶ್ರಮ
ಮಲಪ್ರಭಾ ನದಿ ಪ್ರವಾಹಕ್ಕೆ ಜಿಲ್ಲೆಯ ಹಲವು ಗ್ರಾಮಗಳು ಮುಳುಗಡೆಯಾಗಿದ್ದು,ಈ ಹಿನ್ನೆಲೆಯಲ್ಲಿ ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿರುವ ಸಂತ್ರಸ್ತರನ್ನು ನಟ ನೀನಾಸಂ ಸತೀಶ್ ಭೇಟಿ ಮಾಡಿ, ಅವರಿಗೆ ಪರಿಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿದರು.
![ಜಿಲ್ಲೆಯ ಮುಳುಗಡೆ ಸ್ಥಳಗಳಿಗೆ ಭೇಟಿ ನೀಡಿದ ನಟ ನೀನಾಸಂ ಸತೀಶ್](https://etvbharatimages.akamaized.net/etvbharat/prod-images/768-512-4156626-thumbnail-3x2-karavtalijpg.jpg)
Actor Ninasam satish,ನಟ ನೀನಾಸಂ ಸತೀಶ್
ಮುಳುಗಡೆ ಸ್ಥಳಗಳಿಗೆ ಭೇಟಿ ನೀಡಿದ ನಟ ನೀನಾಸಂ ಸತೀಶ್
ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿದ್ದ ಸಂತ್ರಸ್ತರೊಂದಿಗೆ ಕೆಲ ಸಮಯ ಕಾಲ ಕಳೆದು ಅವರ ನೋವು ಆಲಿಸಿದ್ರು. ಬಳಿಕ ರೋಣ ತಾಲೂಕಿನ ಹೊಳೆ ಮಣ್ಣೂರು ಗ್ರಾಮಕ್ಕೂ ಭೇಟಿ ನೀಡಿದ ಸತೀಶ್ ಅವರು ತಾವು ತಂದಿದ್ದ ಪರಿಹಾರ ಸಾಮಾಗ್ರಿಗಳನ್ನು ಸಂತ್ರಸ್ಥರಿಗೆ ವಿತರಣೆ ಮಾಡಿದರು.
ಇದೇ ವೇಳೆ ವಿರೇಶ್ವರ ಪುಣ್ಯಾಶ್ರಮದ ಪುಟ್ಟಯ್ಯಜ್ಜನ ಗದ್ದುಗೆ ದರ್ಶನ ಪಡೆದ ಸತೀಶ ಕಲ್ಲಯ್ಯಜ್ಜನವರ ಆಶೀರ್ವಾದ ಪಡೆದರು. ಇನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರ ವಿಷಯವಾಗಿ ಸ್ಪಂದಿಸುತ್ತಿರುವ ದಾನಿಗಳಿಗೆ ಧನ್ಯವಾದ ತಿಳಿಸಿಸಿದರು.