ಕರ್ನಾಟಕ

karnataka

ETV Bharat / state

ಭ್ರಷ್ಟರ ಬೇಟೆ: ಲಂಚ ಪಡೆಯುತ್ತಿದ್ದ ಗದಗ ಪಿಡಬ್ಲ್ಯೂಡಿ ಎಸ್​ಡಿಎ ಬಂಧನ - ಪಿಡಬ್ಲ್ಯೂಡಿ ಎಸ್​ಡಿಎ ಬಂಧನ

ಕ್ಲಾಸ್ 4 ಲೈಸನ್ಸ್​ನ ಆದೇಶ ಪ್ರತಿ ನೀಡಲು ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಗದಗ ಎಸಿಬಿ ಅಧಿಕಾರಿಗಳು ಪಿಡಬ್ಲ್ಯೂಡಿ ಎಸ್​ಡಿಎಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

acb-ride-in-gadag
ಗದಗ ಪಿಡಬ್ಲ್ಯೂಡಿ ಎಸ್​ಡಿಎ ಬಂಧನ

By

Published : Jul 21, 2020, 3:23 PM IST

ಗದಗ : ಗುತ್ತಿಗೆದಾರನಿಗೆ ಕ್ಲಾಸ್ 4 ಲೈಸನ್ಸ್​ನ ಆದೇಶ ಪ್ರತಿ ನೀಡಲು ಲಂಚದ ಬೇಡಿಕೆಯಿಟ್ಟಿದ್ದ ಪಿಡಬ್ಲ್ಯೂಡಿ ಎಸ್​ಡಿಎ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಮುಳಗುಂದ ನಾಕಾ ಬಳಿಯಿರುವ ಪಿಡಬ್ಲ್ಯೂಡಿ ಕಚೇರಿಯಲ್ಲಿ ಎಸ್​​ಡಿಎ ಹನುಮಂತ ಕದಾಂಪುರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಲಂಚ ಪಡೆಯುತ್ತಿದ್ದ ಗದಗ ಪಿಡಬ್ಲ್ಯೂಡಿ ಎಸ್​ಡಿಎ ಬಂಧನ

ಆನಂದ್ ಎನ್ನುವವರಿಗೆ ಕ್ಲಾಸ್ 4 ಪರವಾನಗಿ ಆದೇಶ ಪ್ರತಿ ನೀಡಲು, ಹನುಮಂತ 2 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಈ ಹಣ ಪಡೆಯುವ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿ ಅಧಿಕಾರಿಯನ್ನು ರೆಡ್‌ ಹ್ಯಾಂಡ್‌ ಆಗಿ ವಶಕ್ಕೆ ಪಡೆದಿದ್ದಾರೆ. ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details