ಗದಗ: ಶೌಚಾಲಯ ಕಾಮಗಾರಿಯ ಎಂ ಬಿ ಕಂಪ್ಲೀಷನ್ ಸರ್ಟಿಫಿಕೇಟ್ ಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಜೂನಿಯರ್ ಇಂಜಿನಿಯರ್ ಒಬ್ಬರು ಎಸಿಬಿ ಬೆಲೆಗೆ ಬಿದ್ದಿರುವ ಘಟನೆ ಗದಗನಲ್ಲಿ ನಡೆದಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗೊಜನೂರ ಗ್ರಾಮದಲ್ಲಿ ಕೈಗೊಂಡಿದ್ದ ಸಾಮೂಹಿಕ ಶೌಚಾಲಯ ಕಾಮಗಾರಿಯ ಎಂ ಬಿ ಕಂಪ್ಲಿಷನ್ ಸರ್ಟಿಫಿಕೇಟ್ ಕೊಡಲು ಗುತ್ತಿಗೆದಾರರಿಂದ ಶಿರಹಟ್ಟಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಜೂನಿಯರ್ ಇಂಜಿನಿಯರ್ ಮೀರಾಜುದ್ದೀನ್ ಎಂಬುವರು 15 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದರು.
ಜೂನಿಯರ್ ಇಂಜಿನಿಯರ್ ಎಸಿಬಿ ಬಲೆಗೆ ಲಂಚ ಸ್ವೀಕರಿಸುವ ವೇಳೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಇಂಜಿನಿಯರನನ್ನು ವಶಕ್ಕೆ ಪಡೆದಿದ್ದಾರೆ. ಗದಗ ತಾಲೂಕಿನ ನರಸಾಪೂರ ಗ್ರಾಮದ ಗುತ್ತಿಗೆದಾರ ರವಿಕುಮಾರ್ ನಿಡಗುಂದಿ, ಗೊಜನೂರು ಗ್ರಾಮದಲ್ಲಿ ಎರಡು ಲಕ್ಷ ರೂ ವೆಚ್ಚದಲ್ಲಿ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಿದ್ದರು. ಆದರೆ, ಕಾಮಗಾರಿಯ ಎಂ ಬಿ ಹಾಗೂ ವರ್ಕ್ ಕಂಪ್ಲಿಷನ್ ಸರ್ಟಿಫಿಕೇಟ್ ಕೊಡಲು ಲಂಚದ ಬೇಡಿಕೆ ಇಟ್ಟಿದ್ದರು.
ಎಂ ಬಿ ಹಾಗೂ ಕಂಪ್ಲೀಷನ್ ಸರ್ಟಿಫಿಕೇಟ್ ಕೊಡಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಜ್ಯೂನಿಯರ್ ಇಂಜಿನಿಯರ್ 16 ಸಾವಿರ ರೂ ಲಂಚ ಕೇಳಿದ್ದರು. ಕೊನೆಗೂ 15 ಸಾವಿರ ರೂ.ಗಳಿಗೆ ಸೆಟ್ಲ್ ಆಗಿತ್ತು. ಈ ಕುರಿತು ಗುತ್ತಿಗೆದಾರ ರವಿಕುಮಾರ್ ಎಸಿಬಿಗೆ ದೂರು ನೀಡಿದ್ದರು. ಈ ಹಿನ್ನೆಲೆ ದಾಳಿ ಮಾಡಿದ್ದಾರೆ.