ಗದಗ :ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಟ ಅಧಿಕಾರಿಗಳಿಗೆ ಶಾಖ್ ನೀಡಿದ್ದಾರೆ. ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪ ತಹಶೀಲ್ದಾರ್ ಬಿ.ಎಸ್ ಅಣ್ಣಿಗೇರಿ ಮನೆ, ಕಚೇರಿ, ಅಳಿಯನ ಮನೆ ಹಾಗೂ ಖಾಸಗಿ ಕಚೇರಿಯಲ್ಲಿ ಶೋಧ ಮಾಡಲಾಗುತ್ತಿದೆ.
ಗದಗ ಮತ್ತು ಧಾರವಾಡ ಎಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು 10ಕ್ಕೂ ಹೆಚ್ಚು ಸಿಬ್ಬಂದಿ ಏಕಕಾಲಕ್ಕೆ ನಾಲ್ಕು ಕಡೆ ಶೋಧ ನಡೆಸುತ್ತಿದ್ದಾರೆ. ಜಿಲ್ಲೆಯ ಪಂಚಾಕ್ಷರಿ ನಗರದಲ್ಲಿರುವ ಸ್ವಂತ ಮನೆಯಲ್ಲಿ ಸುಮಾರು 500ಗ್ರಾಂ ಚಿನ್ನಾಭರಣ, ಐದು ಕೆಜಿ ಬೆಳ್ಳಿಯ ಆಭರಣಗಳು, 15 ಸೈಟ್ಗಳು ಮತ್ತು 30ಕ್ಕಿಂತ ಹೆಚ್ಚು ಎಕರೆ ಜಮೀನು ದಾಖಲೆ ಲಭ್ಯವಾಗಿವೆ ಎಂದು ತಿಳಿದು ಬಂದಿದೆ.