ಗದಗ: ಸಿಟಿ ಸರ್ವೇ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಪ್ರಕರಣ ನಗರದಲ್ಲಿ ನಡೆದಿದೆ.
ಗದಗ ಸಿಟಿ ಸರ್ವೇ ಕಚೇರಿ ಮೇಲೆ ಎಸಿಬಿ ದಾಳಿ: ಇಬ್ಬರು ಸಿಬ್ಬಂದಿ ವಶಕ್ಕೆ - ಎಸಿಬಿ ದಾಳಿ
ಗದಗದ ಸಿಟಿ ಸರ್ವೇ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಸಿಟಿ ಸರ್ವೇ ಕಚೇರಿ ಮೇಲೆ ಎಸಿಬಿ ದಾಳಿ
ನಗರದ ತಹಶಿಲ್ದಾರ್ ಕಚೇರಿ ಆವರಣದಲ್ಲಿರುವ ಸಿಟಿ ಸರ್ವೇ ಕಚೇರಿಯ, ಸಿಟಿ ಸರ್ವೇಯರ್ ರಮೇಶ್ ಹಾಗೂ ದಿನಗೂಲಿ ನೌಕರ ಮೋಹನ್ನನ್ನು ವಶಕ್ಕೆ ಪಡೆಯಲಾಗಿದೆ. ಮನೆಯ ನಕಾಶೆ ಮಾಡಿಕೊಡಲು ಚಂದಪ್ಪ ಎನ್ನುವರಿಂದ 10,000 ರೂಪಾಯಿ ಲಂಚ ಪಡೆಯುವಾಗ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ. ಇವರನ್ನು ವಶಕ್ಕೆ ಪಡೆದ ನಂತರ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಗದಗ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.