ಗದಗ :ಯುವಕನೊಬ್ಬ ಕೊರೊನಾ ವೈರಸ್ ಲಕ್ಷಣಗಳಿಂದ ನರಳಾಡ್ತಿದ್ದ ಮನುಕಲಕುವ ಘಟನೆ ಗದಗ-ಬೆಟಗೇರಿ ರಸ್ತೆಯಲ್ಲಿ ನಡೆದಿದೆ. ನಗರದ ಕುರಹಟ್ಟಿಪೇಟೆಯ ನಿವಾಸಿಯಾದ ಸುಮಾರು 20 ವರ್ಷದ ಯುವಕ ರಸ್ತೆಯಲ್ಲಿ ತೀವ್ರ ಎದೆನೋವಿನಿಂದ ಬಳಲುತ್ತಿದ್ದ.
ಕೊರೊನಾ ಲಕ್ಷಣಗಳಿಂದ ನರಳಾಡಿದ ಯುವಕ.. ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೆಳೆಯ - ಕೊರೊನಾ ಲಕ್ಷಣದಿಂದ ನರಳಾಡಿದ ಯುವಕ
ಗಂಟಲು ನೋವು, ಹೊಟ್ಟೆಯುರಿ ಎಂದು ನರಳಾಡುತ್ತಿದ್ದ ಯುವಕ ರಸ್ತೆಯ ಮಧ್ಯದಲ್ಲಿ ಬಿದ್ದು ಒದ್ದಾಡ್ತಿದ್ದರೂ ಜನರು ನಿಂತು ನೋಡ್ತಿದ್ರೆ ವಿನಃ ಆತನ ಬಳಿ ಒಬ್ಬರೂ ಸುಳಿಯಲಿಲ್ಲ. ಸುಮಾರು ಅರ್ಧ ಗಂಟೆ ಆತ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ. ಆ ಬಳಿಕ ಗೆಳೆಯನೊಬ್ಬ ನೆರವಿಗೆ ಮುಂದಾದರು..
ಕೊರೊನಾ ಲಕ್ಷಣಗಳಿಂದ ನರಳಾಡಿದ ಯುವಕ
ಗಂಟಲು ನೋವು, ಹೊಟ್ಟೆಯುರಿ ಎಂದು ನರಳಾಡುತ್ತಿದ್ದ ಯುವಕ ರಸ್ತೆಯ ಮಧ್ಯದಲ್ಲಿ ಬಿದ್ದು ಒದ್ದಾಡ್ತಿದ್ದರೂ ಜನರು ನಿಂತು ನೋಡ್ತಿದ್ರೆ ವಿನಃ ಆತನ ಬಳಿ ಒಬ್ಬರೂ ಸುಳಿಯಲಿಲ್ಲ. ಸುಮಾರು ಅರ್ಧ ಗಂಟೆ ಆತ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ. ಆ ಬಳಿಕ ಗೆಳೆಯನೊಬ್ಬ ನೆರವಿಗೆ ಮುಂದಾದರು.
ಬಳಿಕ 108 ಆ್ಯಂಬುಲೆನ್ಸ್ಗೆ ಫೋನ್ ಮಾಡಿದರು. ಬಳಿಕ ಒಂದು ಗಂಟೆಯ ನಂತರ ಆ್ಯಂಬುಲೆನ್ಸ್ ಬಂದಿದ್ದು, ಯುವಕನನ್ನು ಗದಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.