ಗದಗ: ಹೊಸದಾಗಿ 38 ಶಂಕಿತರು ಸೇರಿ ಒಟ್ಟು 1047 ಜನರ ಮೇಲೆ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಮಾಹಿತಿ ನೀಡಿದ್ದಾರೆ.
ಹೊಸದಾಗಿ 38 ಶಂಕಿತರು ಸೇರಿ ಗದಗ ಜಿಲ್ಲೆಯಲ್ಲಿ 1047 ಜನರ ಮೇಲೆ ನಿಗಾ
ಗದಗ ಜಿಲ್ಲೆಯಲ್ಲಿ ಹೊಸದಾಗಿ 38 ಶಂಕಿತರು ಸೇರಿ 1047 ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನು, 28 ದಿನಗಳ ಕಾಲ ನಿಗಾ ಅವಧಿ ಪೂರೈಸಿದವರು 203 ಜನ ಇದ್ದಾರೆ. ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿ 810 ಜನರಿದ್ದಾರೆ. ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರು ಒಟ್ಟು 33 ಜನರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನು, ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ದ್ರವ ಮಾದರಿಗಳು 1019 ಇದ್ದು, ಇದರಲ್ಲಿ 909 ವರದಿಗಳು ನಕಾರಾತ್ಮಕವಾಗಿವೆ ಎಂದು ಹೇಳಿದ್ದಾರೆ. 52 ವರದಿಗಳು ತಿರಸ್ಕೃತಗೊಂಡಿದ್ದು, ಸೋಮವಾರದ 30 ವರದಿ ಸೇರಿಸಿ ಒಟ್ಟು 54 ವರದಿ ಬರಲು ಬಾಕಿ ಇವೆ. ಜಿಲ್ಲೆಯಲ್ಲಿ ಪಿ-166 , ಪಿ-304, ಪಿ-370, ಪಿ-396 ಸೇರಿ ಒಟ್ಟು 4 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.